ಇತ್ತೀಚಿನ ಸುದ್ದಿ
ಆರ್. ಆರ್. ನಗರ ಚುನಾವಣೆ: ಮುನ್ನಿರತ್ನ, ಕುಸುಮಾ ನಾಮಪತ್ರ ಸಲ್ಲಿಕೆ
October 14, 2020, 2:00 PM

ಬೆಂಗಳೂರು(reporterkarnataka news): ಆರ್ ಆರ್ ವಿಧಾನಸಭೆ ಚುನಾವಣಾ ರಂಗ ಕಾವೇರತೊಡಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮತ್ತು ಸಚಿವ ಆರ್. ಅಶೋಕ್ ಜತೆಗೂಡಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ತಂದೆ ಹನುಮಂತರಾಯಪ್ಪ ಸಾಥ್ ನೀಡಿದರು.