8:52 PM Wednesday20 - January 2021
ಬ್ರೇಕಿಂಗ್ ನ್ಯೂಸ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ…

ಇತ್ತೀಚಿನ ಸುದ್ದಿ

ಪುಟಾಣಿಗಳ ಕೈಯಲ್ಲಿ ಮೂಡಿದ ಕ್ರಿಸ್ಮಸ್ ಗ್ರೀಟಿಂಗ್ಸ್ : ಹರ್ಷಾಕ್, ಕೃಪಾರಿಂದ ವಿಶೇಷ ರೀತಿಯಲ್ಲಿ ಕ್ರಿಸ್ತನಮನ

December 25, 2020, 1:33 PM

ಅನುಷ್ ಪಂಡಿತ್

info.reporterkarnataka@gmail.com

ಡಿಸೆಂಬರ್ ತಿಂಗಳು ಅಂದ್ರೆನೆ ಒಂಥರಾ ಖುಷಿ. ಕಾರಣ ಹೊಸ ವರ್ಷವನ್ನು ಸ್ವಾಗತಿಸುವ ಹೊಸ್ತಿಲಲ್ಲಿರುತ್ತೇವೆ ಜೊತೆಗೆ ಮತ್ತೊಂದು ಹಬ್ಬ ಕ್ರಿಸ್ಮಸ್. ಹೆಸರಿಗೆ ಕ್ರಿಶ್ಚಿಯನ್ನರ ಹಬ್ಬ ಅನ್ನಿಸಿದರೂ ಜಾತಿ, ಧರ್ಮ, ಭಾಷೆ, ಗಡಿಯನ್ನೂ ಮೀರಿ ಎಲ್ಲರೂ ನಮ್ಮದೇ ಹಬ್ಬ ಎನ್ನುವ ರೀತಿಯಲ್ಲಿ ಆಚರಿಸುತ್ತಿರುವುದು ಸಾಮಾನ್ಯ. ಅದೊಂದು ಕೌತುಕ ಹುಟ್ಟಿಸುವ ಹಬ್ಬ ಸಾಂತಾಕ್ಲಾಸ್, ವಿವಿಧ ರೀತಿಯ ಗೋದಲಿಗಳು, ವಿಧ ವಿಧವಾದ ನಕ್ಷತ್ರಗಳು, ಬಗೆ ಬಗೆಯ ಸಿಹಿ ಖಾದ್ಯಗಳು ಹೀಗೆ ಹತ್ತು ಹಲವು ವಿಶಿಷ್ಟತೆಯನ್ನು ಹೊತ್ತು ತರುವ ಸಂಭ್ರಮ

ಸಾಮಾನ್ಯವಾಗಿ ಕ್ರಿಶ್ಚಿಯನ್ನರು ಗೋದಲಿ ನಿರ್ಮಿಸಿ,ಸಾಂತಾಕ್ಲಾಸ್(ಕ್ಯಾರಲ್ ಸಿಂಗಿಂಗ್) ಜತೆಗೆ ಮನೆ ಮನೆಗೆ ಹೋಗಿ ಶುಭಾಶಯದ ಜೊತೆಗೆ ಒಂದಷ್ಟು ಉಡುಗೊರೆ, ಸಿಹಿತಿನಿಸುಗಳನ್ನು ನೀಡುವುದು ಒಂದು ಪದ್ದತಿ.
ಆದರೆ ಕಾಸರಗೋಡಿ ಇಬ್ಬರು ಪುಟಾಣಿ ಮಕ್ಕಳು ಕ್ರಿಸ್ಮಸ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ ಗಮನ ಸೆಳೆದಿದ್ದಾರೆ. ಕಾಸರಗೋಡಿನ ಸುನಿಲ್ ಕುಮಾರ್ ಹಾಗೂ ವರಲಕ್ಷ್ಮೀ ದಂಪತಿಗಳ ಮಕ್ಕಳಾದ ಶ್ರೀಕೃಪಾ ಹಾಗೂ ಹರ್ಷಕ್ ಕ್ರಿಸ್ಮಸ್ ಟ್ರೀ, ಸಾಂತಾಕ್ಲಾಸ್ ಹಾಗೂ ಹಬ್ಬಕ್ಕೆ ಶುಭಕೋರುವ ಗ್ರೀಟಿಂಗ್ ಕಾರ್ಡ್, ಗಿಫ್ಟ್ ಬಾಕ್ಸ್ ಗಳನ್ನು ಸ್ವತಃ ರಚಿಸುವ ಮೂಲಕ ಸುದ್ದಿಯಾಗಿದ್ದಾರೆ.


ಕಾಸರಗೋಡಿನ ಚೆಮ್ಮನಾಡ್ ನ ಯುಪಿ ಸರಕಾರಿ ಶಾಲೆಯಲ್ಲಿ ಶ್ರಿಕೃಪಾ ೫ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಹರ್ಷಾಕ್ ೨ ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಕಲಿಕೆಯ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಆಸಕ್ತಿ ಹೊಂದಿದ ಇವರು ಕ್ರಿಸ್ಮಸ್ ಹಬ್ಬ ಕೇವಲ ಕ್ರಿಶ್ಚಿಯನ್ನರಿಗೆ ಮಾತ್ರವಲ್ಲ ನಾವೂ ಸಹ ವಿಶಿಷ್ಡವಾಗಿ ಆಚರಿಸುತ್ತಿದ್ದೆವೆ ಎಂದು ತೋರಿಸಿಕೊಟ್ಟಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು