ಇತ್ತೀಚಿನ ಸುದ್ದಿ
ಪುಂಜಾಲಕಟ್ಟೆ: ‘ಮಂಕುತಿಮ್ಮನ ಕಗ್ಗದಲ್ಲಿ ಜೀವನ ದರ್ಶನ’ ಆನ್ ಲೈನ್ ವಿಶೇಷ ಉಪನ್ಯಾಸ
October 18, 2020, 10:56 AM

ಪುಂಜಾಲಕಟ್ಟೆ(reporterkarnataka news) :
ಮಂಗಳೂರು ವಿಶ್ವವಿದ್ಯಾಲಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ, ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ(ಘಟಕ 1 ಮತ್ತು 2) ಇದರ ಸಹಯೋಗದೊಂದಿಗೆ “ಮಂಕುತಿಮ್ಮನ ಕಗ್ಗದಲ್ಲಿ ಜೀವನ ದರ್ಶನ” ಎಂಬ ಆನ್ ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮ
ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ
ಜಿ.ಎಸ್. ನಟೇಶ್ (ಉಪನ್ಯಾಸಕರು ಪದವಿಪೂರ್ವ ಕಾಲೇಜು ಜಾವಳ್ಳಿ) ಆಗಮಿಸಿದ್ದು, ಮಂಕುತಿಮ್ಮನ ಕಗ್ಗದಲ್ಲಿ ಅಡಗಿರುವ ಮನುಷ್ಯನ ಜೀವನ ಮೌಲ್ಯಗಳ ಬಗ್ಗೆ ಕಗ್ಗದ ಹಾಡಿನ ಜೊತೆ ಸಭೆಗೆ ತಿಳಿಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಭಟ್ ಕುಳಮರ್ವ ಅಧ್ಯಕ್ಷತೆಯನ್ನು ವಹಿಸಿದ್ದು, IQAC ಸಂಚಾಲಕರಾದ ಪ್ರೊ. ರವಿಶಂಕರ್ ಬಿ. ಹಾಗೂ ಎನ್.ಎಸ್.ಎಸ್ ನ ಸಂಯೋಜಕರಾದ ಪ್ರೊ. ಸಂತೋಷ್ ಪ್ರಭು, ಪ್ರೊ. ರಾಜೇಶ್ವರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಪುಂಜಾಲಕಟ್ಟೆ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಿಂದ ಸುಮಾರು 89 ಮಂದಿ ಉಪಸ್ಥಿತರಿದ್ದರು.
ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಡಿವಿಜಿ ಯವರ ಕಗ್ಗದ ಹಾಡಿನ ಮೂಲಕ ಸಮೀಕ್ಷಾ
ಕಾರ್ಯಕ್ರಮ ಆರಂಭಿಸಿದರು. ರಶ್ಮಿ ಸ್ವಾಗತಿಸಿದರು. ತುಳಸಿ ಅತಿಥಿ ಪರಿಚಯ ಮಾಡಿದರು. ಗಣೇಶ್ ವಂದಿಸಿದರು.