1:06 PM Saturday6 - March 2021
ಬ್ರೇಕಿಂಗ್ ನ್ಯೂಸ್
ತಮಿಳುನಾಡು ವಿಧಾನಸಭೆ ಚುನಾವಣೆ: 243 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ?… ಅಸ್ಸಾಂ: 126 ಸ್ಥಾನಗಳಲ್ಲಿ ಬಿಜೆಪಿ 92ರಲ್ಲಿ ಸ್ಪರ್ಧೆ?: ಮಿಕ್ಕ ಸೀಟುಗಳು ಮಿತ್ರ ಪಕ್ಷಕ್ಕೆ? ಹೊರ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂಡುಗೆರೆಯ ಕುಮಾರ್: ನೆರವಿಗೆ ಬಂದ ಕೆಸಿಎಫ್ ಸೌದಿ… ಕೇರಳ ಬಿಜೆಪಿ ಸಿಎಂ ಕ್ಯಾಂಡಿಡೇಟ್: ಬಿಜೆಪಿ ಹೈಕಮಾಂಡ್ ಇನ್ನೂ ಘೋಷಣೆ ಮಾಡಿಲ್ವಂತೆ! ಸೆಕ್ಸ್ ಸಿಡಿ ಬಳಿಕ ಸಂಕಟದಲ್ಲಿ ಸಾಲು ಸಾಲು ಸಚಿವರು: ಮಾನಹಾನಿ ವರದಿ ತಡೆಯುವಂತೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಡಾ. ಎಂ. ಮೋಹನ್ ಆಳ್ವರಿಗೆ ಕವಿ, ಸಜ್ಜನ ರಾಜಕಾರಣಿ ಬಿ.ಎಂ.ಇದಿನಬ್ಬ ಗೌರವ ಪ್ರಶಸ್ತಿ ಪ್ರದಾನ  ಶ್ಲಾಘ್ಯದಲ್ಲಿ 10ನೇ ತರಗತಿ ಸಿಬಿಎಸ್ ಇ ಗಣಿತ, ವಿಜ್ಞಾನ ಟ್ಯೂಶನ್ ತರಗತಿಗೆ ಪ್ರವೇಶ… ಮಂಗಳೂರಿನಲ್ಲಿ ಹಸುಗೂಸುಗಳ ಬೃಹತ್ ಮಾರಾಟ ಜಾಲ ಪತ್ತೆ: ಗಂಡು ಮಗುವಿಗೆ 6 ಲಕ್ಷ,… ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಾಲಿಕೆಗೆ ದೂರು ರವಾನೆಗೆ ಬರೋಬ್ಬರಿ 8…

ಇತ್ತೀಚಿನ ಸುದ್ದಿ

ಪಬ್, ಫ್ಲೆಕ್ಸ್, ಸ್ಯಾಂಡ್ ಮಾಫಿಯಾಕ್ಕೆ ಅವಕಾಶ ನೀಡಲಾರೆವು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ 

September 17, 2020, 2:32 PM

ಮಂಗಳೂರು(reporterkarnataka news): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಬ್, ಫ್ಲೆಕ್ಸ್ ಹಾಗೂ ಸ್ಯಾಂಡ್ ಮಾಫಿಯಾಕ್ಕೆ ಅವಕಾಶ ನೀಡಲಾರೆವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಪ್ರಯುಕ್ತ ಬಿಜೆಪಿ ವತಿಯಿಂದ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಶಾಂತಿಯುತ ಬದುಕಿಗೆ ಪಬ್, ಡ್ರಗ್ಸ್ ಮುಂತಾದುವುಗಳಿಗೆ ಕಡಿವಾಣ ಹಾಕಬೇಕಾಗಿದೆ. ಹಾಗೆ ಸ್ಯಾಂಡ್ ಮಾಫಿಯಾ ನಡೆಸಲು ಆಸ್ಪದ ನೀಡಲಾರೆವು. ಪ್ರತಿಯೊಬ್ಬರಿಗೆ ಒಂದೆರಡು ಸಾವಿರ ರೂಪಾಯಿ ಬೆಲೆಯಲ್ಲಿ ಮರಳು ಸಿಗುವಂತಾಗಬೇಕು ಎಂದು ಅವರು ನುಡಿದರು.

ಹಿಂದಿನ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕೊಲೆ, ಹಲ್ಲೆಗಳು ಬೇಕಾಬಿಟ್ಟಿಯಾಗಿ ನಡೆಯುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಬಿಜೆಪಿ ಆಡಳಿತದಲ್ಲಿ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಕೊಲೆ ರಾಜಕೀಯಕ್ಕೆ ನಾವು ಎಂದಿಗೂ ಅವಕಾಶ ನೀಡಲಾರೆವು ಎಂದು ಅವರು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು