ಇತ್ತೀಚಿನ ಸುದ್ದಿ
ಪ್ರವಾಸಿಗರ ಆಕರ್ಷಿಸಲು ವಿಶೇಷ ರಿಯಾಯಿತಿ ಘೋಷಿಸಲು ಹೋಟೆಲ್ ಗಳಿಗೆ ಸೂಚನೆ
September 22, 2020, 10:12 AM

ಮಂಗಳೂರು (reporterkarnataka news): ಕೋವಿಡ್ – 19 ರ ಪಿಡುಗಿನಿಂದಾಗಿ ಕುಂಠಿತಗೊಂಡಿರುವ ಪ್ರವಾಸೋದ್ಯಮ ಕ್ಷೇತ್ರವನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದು ಸೂಕ್ತವಾಗಿರುತ್ತದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 27 ರಂದು ನಡೆಯುವ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಪ್ರವಾಸಿಗರಿಗೆ ವಿಶೇಷ ರಿಯಾಯಿತಿಗಳನ್ನು ಪ್ರಕಟಿಸಿ ತಮ್ಮ ಹೋಟೆಲ್ ಆವರಣದಲ್ಲಿ ಪ್ರವಾಸಿಗರು, ಅತಿಥಿಗಳನ್ನು ಸ್ವಾಗತಿಸುವ ಬ್ಯಾನರ್ಗಳನ್ನು ಅಳವಡಿಸಿ ಪ್ರವಾಸೋದ್ಯಮ ದಿನಾಚರಣೆ ಆಚರಿಸಲು ಸೂಚಿಸಲಾಗಿದೆ.
ಜಿಲ್ಲಾಡಳಿತದ ವತಿಯಿಂದ ಕೋವಿಡ್ ಮಾರ್ಗಸೂಚಿ ಅನುಸರಿಸಿ ಸರಳವಾಗಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಪಕ್ವಾಡ್ – 2020 ಅನ್ನು ಬೆಳಿಗ್ಗೆ 10 ಗಂಟೆಗೆ ತಣ್ಣೀರುಬಾವಿ ಕಡಲ ತೀರದ ಬಳಿ ಆಯೋಜಿಸಲಾಗಿದೆ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಪ್ರಕಟಣೆ ತಿಳಿಸಿದೆ.