ಇತ್ತೀಚಿನ ಸುದ್ದಿ
ಪ್ರಸಾದ ಸ್ವೀಕರಿಸಿ ಹೋಗು ಎಂಬ ಆತ್ಮೀಯ ನುಡಿ ಇನ್ನು ನೆನಪು ಮಾತ್ರ
September 6, 2020, 4:00 AM

ವಿಶ್ವಜಿತ್ ಕಾಸರಗೋಡು
ಕೇಶಾವನಂದ ಭಾರತಿ ಸ್ವಾಮೀಜಿ ನನ್ನ ಊರಿನ ಸ್ವಾಮೀಜಿ. ಹೀಗಿರುವಾಗ ಪ್ರತಿಬಾರಿ ಊರಿಗೆ ಹೋದಾಗ ಮಠಕ್ಕೆ ತಪ್ಪದೇ ಭೇಟಿ ನೀಡುತ್ತಿದೆ. ಎರಡು ಕಾರಣಗಳಿತ್ತು. ಒಂದು ಸ್ವಾಮೀಜಿ ಅವರ ಜತೆ ಸ್ವಲ್ಪ ಹೊತ್ತು ಮಾತುಕತೆ.. ಇನ್ನೊಂದು ಅವರು ಆತ್ಮೀಯತೆಯಿಂದ ಪ್ರಸಾದ ಸ್ವೀಕರಿಸಿ ಎಂದು ಮಾಡುವ ಮನವಿ.
ಮಠದ ಪಾಕ ಶಾಲೆಯಲ್ಲಿ ಒಲೆ ಸದಾ ಉರಿಯುತ್ತಿರುತ್ತದೆ. ಶುಚಿ ರುಚಿಯಾದ ಊಟ, ಆತ್ಮೀಯ ಮಾತುಕತೆ ಇದು ಎಡನೀರು ಮಠದ ವೈಶಿಷ್ಟ್ಯ. ಶಿವ ಮತ್ತು ವಿಷ್ಣು ವಿಗೆ ಇಲ್ಲಿ ಆರಾಧನೆ ನಡೆಯುತ್ತದೆ. ಇದು ಮಠದ ಪರಂಪರೆ,
ಮುಖ್ಯವಾಗಿ ಲಲಿತ ಕಲೆಗಳಿಗೆ ಶ್ರೀಮಠದ ಪ್ರೋತ್ಸಾಹ ಅನನ್ಯ. ಅದರಲ್ಲೂ ಮುಖ್ಯವಾಗಿ ಯಕ್ಷಗಾನವನ್ನು ಶ್ರೀಮಂತಗೊಳಿಸಿದವರಲ್ಲಿ ಶ್ರೀ ಕೇಶಾವನಂದ ಶ್ರೀಗಳು ಮುಖ್ಯ ಪಾತ್ರ ವಹಿಸಿದ್ದರು. ಅತ್ಯುತ್ತಮ ಭಾಗವತರಾಗಿದ್ದ ಶ್ರೀಗಳು ಹಲವು ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ಬೆಳಕಿಗೆ ತಂದಿದ್ದಾರೆ.
ಇಂಟರ್ ನೆಟ್ ಯುಗ ಕಾಲಿಡುವ ಮೊದಲೇ ಶ್ರೀ ಮಠದ ಜತೆ ದೂರದ ಊರಿನ ಭಕ್ತರನ್ನು ಸಂಯೋಜಿಸಿದ ಹೆಗ್ಗಳಿಕೆ ಶ್ರೀಗಳಾದ್ದಾಗಿದೆ.