ಇತ್ತೀಚಿನ ಸುದ್ದಿ
ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆ: ವಿದ್ಯಾರ್ಥಿಗಳಿಗೆ ಆನ್ ಲೈನ್ ಪ್ರಬಂಧ ಸ್ಪರ್ಧೆ
October 21, 2020, 8:02 AM

ಬಂಟ್ವಾಳ(reporterkarnataka news): ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೦ ನೇ ಜನ್ಮಶತಾಬ್ದಿಯ ಸಮರೋಪ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ ೨೦೨೦ರ ತಿಂಗಳನ್ನು ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರಬಂಧ ಸ್ವರ್ಧೆ ಆಯೋಜಿಸಲಾಗಿದೆ.
ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಆನ್ ಲೈನ್ ಮೂಲಕ “ತಾಜ್ಯ ನಿರ್ವಹಣೆ, ನಮ್ಮ ಜವಾಬ್ದಾರಿ” ಎಂಬ ವಿಷಯದ ಕುರಿತು ಪ್ರಬಂಧ ಸ್ವರ್ಧೆಯನ್ನು ಆಯೋಜಿಸಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಿಗೆ ಸ್ವರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.

ಪ್ರಬಂಧ ಸ್ವರ್ಧೆಯಲ್ಲಿ ವಿಜೇತರಿಗೆ ಕ್ರಮವಾಗಿ ಪ್ರಥಮ ಬಹುಮಾನ ೩,೦೦೦ರೂ., ದ್ವಿತೀಯ ಬಹುಮಾನ ೨,೦೦೦ರೂ. ಹಾಗೂ ತೃತೀಯ ಬಹುಮಾನ ರೂ.೧,೦೦೦ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಆನ್ ಲೈನ್ ಮೂಲಕ ನಡೆಯುವ ಪ್ರಬಂಧ ಸ್ವರ್ಧೆಗೆ ಭಾಗವಹಿಸುವ ವಿದ್ಯರ್ಥಿಗಳು ತಮ್ಮ ಪ್ರಬಂಧವನ್ನು ಅ. 25 ರೊಳಗೆ ಈ ಕಚೇರಿಯ ಈ ಮೇಲ್ ವಿಳಾಸಕ್ಕೆ (ds-dakshinakannada@gov.in) ಕಳುಹಿಸಿ ಕೊಡಬೇಕೇಂದು ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹನಾಧಿಕಾರಿಯವರ ಪ್ರಕಟಣೆಯಲ್ಲಿ ತಿಳಿಸಿದೆ.