8:22 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ಡಾ.ಪ್ರಭಾಕರ ನೀರ್ ಮಾರ್ಗ ಅವರ 26ನೇ ಕಾದಂಬರಿ ‘ಧರ್ಮ ಚಾವಡಿ’ ಬಿಡುಗಡೆ

December 14, 2020, 4:24 PM

ಮಂಗಳೂರು(reporterkarnataka news) :

ಕಾದಂಬರಿಕಾರ , ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲ  ಡಾ.ಪ್ರಭಾಕರ ನೀರ್ ಮಾರ್ಗ ಅವರ 26 ನೇ ಕಾದಂಬರಿ ‘ ಧರ್ಮ ಚಾವಡಿ ‘ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ‘ ವೀ ಫೋರ್ ‘ ಸ್ಟುಡಿಯೋ ದಲ್ಲಿ ನಡೆಯಿತು.

ತುಳು ಪರಿಷತ್ ಹಾಗೂ ವೀ ಫೋರ್ ಸ್ಟುಡಿಯೋ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ತುಳು ಪರಿಷತ್ ಗೌರವಾಧ್ಯಕ್ಷ ಸ್ವರ್ಣ ಸುಂದರ್ ಅವರು ‘ ಧರ್ಮ ಚಾವಡಿ ‘ ಕೃತಿಯನ್ನು ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸ್ವರ್ಣ ಸುಂದರ್ ಅವರು, ಧರ್ಮ ಚಾವಡಿ ಕಾದಂಬರಿ ಕೃತಿಗೆ ಓದುಗ ವಲಯದಿಂದ ಉತ್ತಮ ಪ್ರತಿಕ್ರಿಯೆ ಲಭಿಸಲಿ, ಕನ್ನಡ ನಾಡು ನುಡಿಗೆ ಪ್ರಭಾಕರ್ ಅವರ ಸೇವೆ ಅನನ್ಯವಾದುದು ಎಂದು ಅಭಿಪ್ರಾಯಪಟ್ಟರು. 

ಧರ್ಮ ಚಾವಡಿ ಕಾದಂಬರಿ ಬಗ್ಗೆ ಮಾತನಾಡಿದ ಮೂಲ್ಕಿ ಸರಕಾರಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಅವರು, ಈ ಕಾದಂಬರಿಯು ತುಳುನಾಡಿನ ಬದುಕು , ಭೂತಾರಧನೆಯ ನಂಬಿಕೆ, ತುಳು ಸಂಸ್ಕೃತಿಯನ್ನು ಅನಾವರಣ ಮಾಡುತ್ತದೆ, ತುಳುನಾಡು  ಆಧುನಿಕತೆಗೆ ಪರಿವರ್ತನೆಯಾಗುವ ಕಥನವನ್ನು  ಬಣ್ಣಿಸುತ್ತದೆ ಎಂದು ಹೇಳಿದರು. ತುಳುವರ ಬದುಕಿನಲ್ಲಿರುವ ನ್ಯಾಯ ಧರ್ಮವನ್ನು ಕಾದಂಬರಿ ಪರಿಣಾಮಕಾರಿಯಾಗಿ ಧ್ವನಿಸಿದೆ ಎಂದು ವಾಸುದೇವ ಬೆಳ್ಳೆ ಅವರು ಹೇಳಿದರು. 

ಧರ್ಮ ಚಾವಡಿ ಕಾದಂಬರಿ ಲೇಖಕ ಡಾ.ಪ್ರಭಾಕರ ನೀರ್ ಮಾರ್ಗ ಅವರು ಮಾತನಾಡಿ , ನಾನೋರ್ವ ತುಳುವ , ನನ್ನ ತುಳು ನಾಡಿನ ನಂಬಿಕೆ , ಆಚಾರ ವಿಚಾರ , ಸಂಸ್ಕೃತಿ ಬಗ್ಗೆ ತುಳುನಾಡಿನ ಹೊರಭಾಗದ ಕನ್ನಡಿಗರಿಗೂ ತಲುಪಬೇಕು ಎಂಬ ಉದ್ದೇಶದಿಂದ ತಾನು ಕನ್ನಡದಲ್ಲಿ ಬರೆಯಲು ನಿರ್ಧರಿಸಿದೆ , ಕಾದಂಬರಿಗಳು ಜನ ಸಾಮಾನ್ಯರಿಂದ ಎಲ್ಲಾ ವರ್ಗದ ಸಾಹಿತ್ಯ ಪ್ರೇಮಿಗಳನ್ನು ತಲಪುವ ಮಾಧ್ಯಮವಾಗಿರುವುದರಿಂದ ತಾನು ಕಾದಂಬರಿ ಬರೆಯಲು ಹೆಚ್ಚಿನ ಒಲವು ಹಾಗೂ ಆದ್ಯತೆ ನೀಡಿದೆ ಎಂದು ಹೇಳಿದರು . 

ಕಾರ್ಯಕ್ರಮದಲ್ಲಿ ಸಾಹಿತ್ಯ ವಿಮರ್ಶಕ ಪ್ರತಾಪ ಚಂದ್ರ ಶೆಟ್ಟಿ ,  ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ , ಮಂಗಳೂರು ವಿ.ವಿ.ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಹಾಯಕ ಸಂಶೋಧಕ ಯತೀಶ್ ಕುಡುಪು ಅವರು ಪ್ರಭಾಕರ ನೀರ್ ಮಾರ್ಗ ಅವರ ಸಾಹಿತ್ಯ ಕೃತಿಗಳ ಬಗ್ಗೆ ಹಾಗೂ ಜೀವನ ಸಾಧನೆ ಬಗ್ಗೆ ಮಾತನಾಡಿದರು. 

ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತುಳು ಪರಿಷತ್ ಕೋಶಾಧಿಕಾರಿ ಶುಭೋದಯ ಆಳ್ವ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು