ಇತ್ತೀಚಿನ ಸುದ್ದಿ
ಪಿಎಂ ಕೇರ್ಸ್ ಫಂಡ್: ಕೇಂದ್ರ ಸರಕಾರಕ್ಕೆ ರಿಲೀಫ್, ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
August 18, 2020, 8:25 AM

ನವದೆಹಲಿ (reporterkarnataka news):
ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟು ಹಾಕಿರುವ ಪಿಎಂ ಕೇರ್ಸ್ ಫಂಡ್ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ ಡಿ ಆರ್ ಎಫ್) ಗೆ ವರ್ಗಾಯಿಸಬೇಕೆಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತ್ವದ ಪೀಠ ಈ ತೀರ್ಪು ನೀಡಿದೆ.
ಪಿಎಂ ಕೇರ್ ಫಂಡ್ ಗೆ ಸ್ವಯಂ ಪ್ರೇರಿತರಾಗಿ ಕೊ಼ಡುಗೆ ನೀಡುತ್ತಿದ್ದಾರೆ. ಪಿಎಂ ಕೇರ್ ಫಂಡ್ ಮತ್ತು ಎನ್ ಡಿ ಆರ್ ಎಫ್ ಎರಡೂ ಕೂಡ ಪ್ರತ್ಯೇಕವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸರ್ಕಾರ ತನ್ನ ವಿವೇಚನೆ ಬಳಸಿ ಪಿಎಂ ಕೇರ್ ನಿಧಿಯಿಂದ ಎನ್ ಡಿ ಆರ್ ಎಫ್ ಗೆ ನಿಧಿ ವರ್ಗಾಯಿಸಬಹುದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ..