ಇತ್ತೀಚಿನ ಸುದ್ದಿ
ಕೆಂಪು ಕೋಟೆಯಲ್ಲಿ ಅನುರಣಿಸಿದ ಆತ್ಮ ನಿರ್ಭರ ಭಾರತದ ಘಂಟಾಘೋಷ : ದೇಶದ ಸಾರ್ವಭೌಮತೆಯಲ್ಲಿ ರಾಜಿ ಇಲ್ಲ ಎಂದ ಪ್ರಧಾನಿ
August 15, 2020, 4:36 AM

ನವದೆಹಲಿ(reporterkarnataka news):
74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಆತ್ಮ ನಿರ್ಭರ ಭಾರತ , ಸ್ವಾವಲಂಬಿ ಭಾರತದ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದರು.
ವಿಶ್ವದ ಆರ್ಥಿಕ ಕ್ಷೇತ್ರದಲ್ಲಿ ಭಾರತದ ಕೊಡುಗೆ ಹೆಚ್ಚಾಗಬೇಕು. ಭಾರತ ಸದೃಢವಾಗಬೇಕು. 130 ಕೋಟಿ ಜನ ಸಂಖ್ಯೆ ಇರುವ ಭಾರತ ಈ ದಿಕ್ಕಿನಲ್ಲಿ ಮುಂದುವರಿಯುತ್ತಿದೆ ಎಂದು ಪ್ರಧಾನಿ ಘೋಷಿಸಿದರು.
ಕೊರೋನಾ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ದೇಶದ ಜನರು ಒಗ್ಗಟ್ಟಿನಿಂದ ಈ ಮಹಾಮಾರಿಯ ವಿರುದ್ಧ ಹೋರಾಡುತ್ತಿದೆ. ಇದರಲ್ಲಿ ಯಶಸ್ಸು ಕೂಡ ಗಳಿಸಿದ್ದೇವೆ. ಇಂದಿನ ಸಮಾರಂಭದಲ್ಲಿ ಮಕ್ಕಳ ಅನುಪಸ್ಥಿತಿ ನನ್ನನ್ನು ಕಾಡುತ್ತಿದೆ. ಆದರೆ ಭಾರತ ಎಲ್ಲ ಅಡೆತಡೆಗಳನ್ನು ನಿವಾರಿಸಿ ಮುನ್ನುಗ್ಗಲಿದೆ ಎಂದು ಪ್ರಧಾನಿ ಘೋಷಿಸಿದರು.
ದೇಶದ ಸಾರ್ವಭೌಮತ್ವ ವಿಷಯದಲ್ಲಿ ಯಾವುದೇ ರಾಜೀ ಇಲ್ಲ, ನಮ್ಮ ನೆಲದ ಮೇಲೆ ಕಣ್ಣು ಹಾಕಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗುವುದು ಎಂದು ಪ್ರಧಾನಿ ಘೋಷಿಸಿದರು.