8:28 AM Tuesday26 - January 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ

ಇತ್ತೀಚಿನ ಸುದ್ದಿ

ಕುಡಿಯುವ ನೀರು ಸಪ್ಲೈ ಮಾಡುವ ಪೈಪ್‌ ಮೇಲೆ ಶೌಚಾಲಯ ಪಿಟ್ ನಿರ್ಮಾಣ ನೂರಾರು ಮನೆಗೆ ನೀರು ಹಂಚುವ ಪೈಪ್ ಸರಕಾರಿ ಕಾಲೇಜ್ ಶೌಚಾಲಯದ ಪಿಟ್ ನಡುವಲ್ಲೇ ಇದೆ

December 16, 2020, 8:43 AM

ವರದಿ : ಅನುಷ್ ಪಂಡಿತ್,ಗಣೇಶ್ ಅದ್ಯಪಾಡಿ

ಮಂಗಳೂರು (Reporter Karnataka News)

ಎಂಜಿನಿಯರ್‌ಗಳ ಅತಿ ಬುದ್ಧಿವಂತಿಕೆಯ ಪರಮಾವಧಿಗೆ ಸಾಕ್ಷಿ ಆಗ್ತ ಇದೆ ನಗರದ ಹಂಪನಕಟ್ಟೆಗೆ ಶಿಫ್ಟ್ ಆದ ಸರಕಾರಿ ಪಿಯು ಕಾಲೇಜ್ ಶೌಚಾಲಯದ ಪಿಟ್

ಹೌದು, ಮಂಗಳೂರು ನಗರದಲ್ಲಿ ಈಗ ಅಗೆಯುವ ಯುಗ ಪ್ರಾರಂಭಗೊಂಡಿದೆ. ಸ್ಮಾರ್ಟ್ ಸಿಟಿಯ ಅತಿ ಸ್ಮಾರ್ಟ್ ಎಂಜಿನಿಯರ್‌ಗಳು ಮಾಡಿಕೊಳ್ಳುವ ಎಡವಟ್ಟುಗಳು ಒಂದಲ್ಲ ಎರಡಲ್ಲ.

ನಗರದ ಮುಖ್ಯ ಭಾಗದಲ್ಲಿ ಒಂದಾಗಿರುವ ಹಂಪನಕಟ್ಟೆಯಲ್ಲಿರುವ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲೇ ಪಿಯು ಕಾಲೇಜ್ ಆರಂಭಗೊಂಡಿದೆ. ಬೊಕ್ಕ ಪಟ್ಣದಿಂದ ಇಲ್ಲಿಗೆ ಶಿಫ್ಟ್ ಆದ ಈ ಕಾಲೇಜ್‌ಗೆ ಶೌಚಾಲಯ ನಿರ್ಮಾಣವಾಗಿದ್ದು ಈ ಶೌಚಾಲಯಕ್ಕೆ ಪಿಟ್ ಕೆಲಸ ಮಾತ್ರ ಅತಿ ಬುಧ್ಧಿವಂತಿಕೆಯಿಂದ ನಡೆಯುತ್ತಾ ಇದೆ‌.

ಯಾಕಪ್ಪ ಅಂತೀರಾ ಈ ಪಿಟ್‌ಗಾಗಿ ತೆಗೆದ ಗುಂಡಿಯ ನಡುವೆಯೆ ನೂರಾರು ಮನೆಗಳಿಗೆ ನೀರು ಸರಬರಾಜು ಮಾಡುವ ಪೈಪ್ ಇದೆ. ಆದರೆ ಇಲ್ಲಿಯ ಅಭಿಯಂತರರು, ಗುತ್ತಿಗೆದಾರರು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ತಜ್ಞರ ಪ್ರಕಾರ ಈ ರೀತಿ ಪೈಪ್ ಅಳವಡಿಸುವುದು ಸೂಕ್ತವಲ್ಲ ಹಾಗೂ ಅದಕ್ಕೆ ಅವಕಾಶವೂ ಇಲ್ಲ. ಒಂದು ವೇಳೆ ರಾಸಾಯನಿಕ ಕ್ರಿಯೆಯ ಮೂಲಕ ಪೈಪ್‌ಗೆ ಡ್ಯಾಮೇಜ್ ಉಂಟಾದರೆ ನೀರು ಸರಬರಾಜಾಗುವ ಮನೆಯ ಮಂದಿ ಆಸ್ಪತ್ರೆಗೆ ಸೇರುವಂತಾಗುವುದು ಖಚಿತ.
ಪೋಲಿಸ್ ಲೇನ್ ಸೇರಿದಂತೆ ಮೊದಲಾದ ಭಾಗಗಳಿಗೆ ಪಾಲಿಕೆ ನೀರು ಈ ಪೈಪ್ ಮೂಲಕವೇ ಹೋಗುತ್ತದೆ. ಆದರೆ ಇಲ್ಲಿಯ ಸ್ಥಳೀಯ ಕಾರ್ಪೋರೇಟರ್ ಆಗಲಿ ಶಾಸಕರಾಗಲಿ ಈ ಬಗ್ಗೆ ಗಮನವೇ ಹರಿಸಿಲ್ಲ. ಈ ರೀತಿಯ ನಿರ್ಲಕ್ಷತಣ ಜನರ ಆರೋಗ್ಯದೊಂದಿಗೆ ಆಡುವ ಆಡಳಿತ ವ್ಯವಸ್ಥೆ ಬೇಗ ಕಣ್ತೆರೆಯಲಿ ಎನ್ನುವುದು ಸ್ಥಳೀಯರ ಆಗ್ರಹ.

ಇತ್ತೀಚಿನ ಸುದ್ದಿ

ಜಾಹೀರಾತು