ಇತ್ತೀಚಿನ ಸುದ್ದಿ
ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಇಂದು ಅವಿಶ್ವಾಸ ನಿರ್ಣಯ
August 24, 2020, 4:24 AM

ತಿರುವನಂತಪುರಂ(reporter Karnataka news):
ಕೇರಳದಲ್ಲಿ ಆಡಳಿತಾರೂಢ ಸಿಪಿಎಂ ನೇತೃತ್ವದ ರಾಜ್ಯ ಸರ್ಕಾರದ ವಿರುದ್ದ ಪ್ರತಿಪಕ್ಷ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತು ಇಂದು ಚರ್ಚೆ ನಡೆಯಲಿದೆ. ಒಂದು ದಿನದ ವಿಧಾನಸಭೆ ಅಧಿವೇಶನವನ್ನು ಇಂದು ಕರೆಯಲಾಗಿದೆ. ಐದು ಗಂಟೆಗಳ ಚರ್ಚೆಯ ಬಳಿಕ ಈ ಕುರಿತು ಮತದಾನ ನಡೆಯಲಿದೆ.
ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರಕ್ಕೆ ಸದನದಲ್ಲಿ ಅಗತ್ಯ ಸಂಖ್ಯಾ ಬಲ ಇದೆ. ಆದುದರಿಂದ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಲು ಕಾಂಗ್ರೆಸ್ ಇದನ್ನು ಸದುಪಯೋಗಪಡಿಸಲಿದೆ. ಚಿನ್ನ ಕಳ್ಳ ಸಾಗಾಟ ಪ್ರಕರಣ, ವಸತಿ ಯೋಜನೆಯಲ್ಲಿನ ಭ್ರಷ್ಟಾಚಾರ ಕಾಂಗ್ರೆಸ್ ನ ಪ್ರಮುಖ ಅಸ್ತ್ರಗಳಾಗಿವೆ.
ಬಿಜೆಪಿ ಸದಸ್ಯ ಒ. ರಾಜಗೋಪಾಲ್ ಸಭೆಯಲ್ಲಿ ಯಾವ ನಿಲುವು ತಳೆಯುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.