6:48 PM Monday18 - January 2021
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ… ಸಚಿವ ಅಂಗಾರ ತವರಿನಲ್ಲಿ ಕಮಲ ಕದನ: ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಮಂಡಲ ಸಮಿತಿಗೆ… ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ… ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿವೇಕಾ ಸಂದೇಶ 2021’ ಕಾರ್ಯಕ್ರಮ ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಭದ್ರಾವತಿ: ಕ್ಷಿಪ್ರ ಕಾರ್ಯಪಡೆ ಕಚೇರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ…

ಇತ್ತೀಚಿನ ಸುದ್ದಿ

ಮೊಗದಲ್ಲಿನ ಮೊಡವೆ ಮುಜುಗರವನ್ನುಂಟು ಮಾಡುತ್ತಿದೆಯಾ…? ಚಿಂತಿಸಬೇಡಿ !!

August 6, 2020, 5:50 AM

ಪವಿತ್ರಾ ಶೆಟ್ಟಿ ಯೆಡ್ತಾಡಿ

info.reporterkarnataka@gmail.com

ಮೊಡವೆ, ಕಲೆ, ಚುಕ್ಕಿ ತುಂಬಿದ ಮುಖವೆಂದರೆ ಹೆಣ್ಣುಮಕ್ಕಳು ಬೆಚ್ಚಿ ಬೇಳುತ್ತಾರೆ. ಇದು ತೀರಾ ಮುಜುಗರವನ್ನುಂಟು ಮಾಡುವುದಲ್ಲದೇ, ಆತ್ಮವಿಶ್ವಾಸವನ್ನೇ ಕಡಿಮೆ ಮಾಡುತ್ತದೆ. ಯಾರ ಮುಂದೆ ಹೋಗುವುದಕ್ಕೂ ಒಂದು ರೀತಿಯ ಹಿಂಜರಿಕೆ ಅಳುಕು ಕಾಡುತ್ತದೆ. ಇದರ ಜತಗೆ ಏನೇ ಮೇಕಪ್ ಮಾಡುವುದಕ್ಕೂ ಭಯ. ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಮುಖದಲ್ಲಿನ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಮೊದಲಿಗೆ ಏನೇ ಮನೆಮದ್ದುಗಳನ್ನು ಉಪಯೋಗಿಸುವ ಮೊದಲು ಅದು ನಿಮ್ಮ ತ್ವಚೆಗೆ ಸರಿಹೊಂದುತ್ತದೆಯಾ ಎಂದು ಪರೀಕ್ಷಿಸಿಕೊಂಡು ಹಚ್ಚಿ. ಇಲ್ಲೊಂದಿಷ್ಟು ಟಿಪ್ಸ್ ಇದೆ ಪ್ರಯತ್ನಿಸಿ ನೋಡಿ.

ಒಂದು ಬೌಲ್ ಗೆ 1 ಟೀ ಸ್ಪೂನ್ ಜೇನುತುಪ್ಪ ಹಾಗೂ 1 ಟೀ ಸ್ಪೂನ್ ಕಿತ್ತಳೆಹಣ್ಣಿನ ಸಿಪ್ಪೆಯ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ಕಲೆಗಳಿಗೂ ಹಾಕಬಹುದು. ನಂತರ ಇದು ಒಣಗಿದ ಮೇಲೆ ತಣ್ಣಿರಿನಿಂದ ಮುಖ ತೊಳೆಯಿರಿ. ವಾರದಲ್ಲಿ 3 ಬಾರಿ ಇದನ್ನು ಹಚ್ಚಿಕೊಳ್ಳಿ.

ಟೀ ಟ್ರೀ ಆಯಿಲ್ ಕೂಡ ಮೊಡವೆ ನಿವಾರಿಸುವುದರಲ್ಲಿ ಹೆಚ್ಚು ಸಹಾಯಕಾರಿಯಾಗಿದೆ. 3 ಹನಿ ಟಿ ಟ್ರೀ ಆಯಿಲ್ ಗೆ ಸ್ವಲ್ಪ ಬಾದಾಮಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖದ ಕಲೆ ಇರುವ ಭಾಗಕ್ಕೆ ಹಚ್ಚಿಕೊಳ್ಳಿ. ಯಾವುದೇ ಕಾರಣಕ್ಕೂ ಮಸಾಜ್ ಮಾಡಿಕೊಳ್ಳಬೇಡಿ. 1 ಗಂಟೆಗಳ ಹೊತ್ತು ಇದನ್ನು ಹಾಗೆಯೇ ಬಿಡಿ.ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ದಿನಕ್ಕೊಂದು ಸಲ ಇದನ್ನು ಮಾಡಿ.

ಇತ್ತೀಚಿನ ಸುದ್ದಿ

ಜಾಹೀರಾತು