ಇತ್ತೀಚಿನ ಸುದ್ದಿ
ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಹೆಸರಿನಲ್ಲಿ ಜನರ ಆರ್ಥಿಕ ಶೋಷಣೆ: ಸುಬ್ರಹ್ಮಣ್ಯಂ ಸ್ವಾಮಿ
December 8, 2020, 8:55 AM

ನವದೆಹಲಿ(reporterkarnataka news): ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಹೆಸರಿನಲ್ಲಿ ಜನರ ಆರ್ಥಿಕ ಶೋಷಣೆ ಮಾಡುತ್ತಿದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಯಂ ಸ್ವಾಮಿ ಆರೋಪಿಸಿದ್ದಾರೆ.
ತೈಲ ಸಂಸ್ಕರಣೆ ಘಟಕ ತಲುಪುವ ಮೊದಲು ಪೆಟ್ರೋಲ್ ದರ ಲೀಟರ್ ಗೆ ಕೇವಲ 30 ರೂಪಾಯಿ ಆಗಿರುತ್ತದೆ. ಬಳಿಕ ಎಲ್ಲ ತೆರಿಗೆಗಳನ್ನು ವಿಧಿಸಿ ಅದು ಲೀಟರ್ ಗೆ 90 ರೂಪಾಯಿ ತಲುಪುತ್ತಿದೆ . ಮಾರುಕಟ್ಟೆಯಲ್ಲಿ 90 ರೂಪಾಯಿ ತೆತ್ತು ಖರೀದಿಸಬೇಕಾದ ಸ್ಥಿತಿ ಇದೆ ಎಂದು ಸುಬ್ರಹ್ಮಣ್ಯಂ ಸ್ವಾಮಿ ಟೀಕಿಸಿದ್ದಾರೆ.