ಇತ್ತೀಚಿನ ಸುದ್ದಿ
ಗೂಗಲ್ ಪ್ಲೇ ಸ್ಟೋರಿನಿಂದ ಪೇಟಿಎಂ ಗಾಯಬ್..!! ಏನಿರಬಹುದು ಇದರ ಹಿಂದಿನ ಕಾರಣ ?
September 18, 2020, 5:31 PM

ನವದೆಹಲಿ (Reporter Karnataka News)
ಗೂಗಲ್ ಪ್ಲೇ ಸ್ಟೋರಿಂದ ಪೇಟಿಎಂ ಆ್ಯಪನ್ನು ಗೂಗಲ್ ತೆಗೆದು ಹಾಕಿದ್ದು, ಈಗ ಕೋಟ್ಯಾಂತರ ಬಳಕೆದಾರನ್ನು ಗೊಂದಲಕ್ಕೀಡು ಮಾಡಿದೆ.
ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಫೊರ್ ಬ್ಯುಸಿನೆಸ್, ಪೇಟಿಎಂ ಫೋರ್ ಮನಿ ಹಾಗೂ ಪೇಟಿಎಂಗೆ ಸಂಬಂಧಿಸಿದ ಇತರ ಆಯಪ್ ಗಳು ಈಗಲೂ ಲಭ್ಯವಿದೆ.
ಈ ಆ್ಯಪ್ ರಿಮೂವ್ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೂಗಲ್, ಐಪಿಎಲ್ ಸರಣಿಯನ್ನು ಮೂಲವಾಗಿಟ್ಟು ಜೂಜಿನ ಆನ್ಲೈನ್ ಪ್ಲಾಟ್ಫಾರಂನ್ನು ಪೇಟಿಎಂ ಅಳವಡಿಸಿಕೊಂಡಿತ್ತು ಅದು ನಮ್ಮ ಪಾಲಿಸಿಗೆ ವಿರುದ್ಧವಾಗಿದೆ ಹಾಗಾಗಿ ಆ್ಯಪನ್ನು ಪ್ಲೇಸ್ಟೋರಿಂದ ತೆಗೆಯಲಾಗಿದೆ. ಆ ಫೀಚರನ್ನು ರದ್ಧುಗೊಳಿಸಿದ ಮೇಲೆ ಪೇಟಿಎಂನ್ನು ಮತ್ತೆ ಪ್ಲೇಸ್ಟೋರಲ್ಲಿ ಕಾಣಬಹುದು ಅದೇ ರೀತಿ ಈಗಾಗಲೇ ಉಪಗೋಗಿಸುವವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.