ಇತ್ತೀಚಿನ ಸುದ್ದಿ
ಪರ್ಷಿಯನ್ ಬೋಟ್ ಅವಘಡದಲ್ಲಿ ಸಾವನ್ನಪ್ಪಿದವರ ಶೋಕಾರ್ಥ ಮಂಗಳೂರು ಮೀನು ಮಾರುಕಟ್ಟೆ ಬಂದ್
December 2, 2020, 12:04 PM

ಮಂಗಳೂರು( reporterkarnataka news):
ಮೀನುಗಾರಿಕೆಗೆ ತೆರಳಿದ ಪರ್ಷಿಯನ್ ಬೋಟ್ ಮಗುಚಿದ ಪರಿಣಾಮ ಇಬ್ಬರು ಮೃತಪಟ್ಟು ನಾಲ್ವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಬುಧವಾರ ಮಂಗಳೂರಿನಲ್ಲಿ ಮೀನುಗಾರಿಕೆ ಬಂದ್ ಮಾಡಿ ಶೋಕಾಚರಿಸಲಾಯಿತು.
ನಗರದ ಪ್ರಮುಖ ಮೀನು ಮಾರುಕಟ್ಟೆಯಾದ ಸ್ಟೇಟ್ ಬ್ಯಾಂಕ್ ಬಳಿಯ ಫಿಶ್ ಮಾರ್ಕೆಟ್ ಬುಧವಾರ ಬೆಳಗ್ಗಿನಿಂದಲೇ ಸ್ತಬ್ದವಾಗಿತ್ತು. ಬಿಜೈ, ಉರ್ವ, ಅಳಕೆ ಮೀನು ಮಾರುಕಟ್ಟೆಗಳಲ್ಲಿ ಕೂಡ ಮೀನುಗಾರರು ಬಂದ್ ಆಚರಿಸಿದರು. ಮಾರುಕಟ್ಟೆಯಲ್ಲಿ ಕವಚಿ ಹಾಕಿದ ಖಾಲಿ ಬುಟ್ಟಿಗಳು ಕಂಡು ಬಂದವು.
ಪರ್ಷಿಯನ್ ಬೋಟ್ ಮಗುಚಿದ ಪರಿಣಾಮ 6 ಮಂದಿ ಮೀನುಗಾರರು ನಾಪತ್ತೆಯಾಗಿದ್ದರು. ಅವರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಮೃತದೇಹಗಳನ್ನು ಬೊಕ್ಕಪಟ್ಣ ನಿವಾಸಿಗಳಾದ ಪ್ರೀತಂ ((25) ಹಾಗೂ ಪಾಂಡುರಂಗ(58) ಎಂದು ಗುರುತಿಸಲಾಗಿದೆ. ಇನ್ನುಳಿದ ನಾಲ್ವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಹೊಸಬೆಟ್ಟು ಮೂಲದ ಮತ್ಸೋದ್ಯಮಿಗೆ ಸೇರಿದ ಶ್ರೀರಕ್ಷಾ ಬೋಟ್ ದುರಂತಕ್ಕೀಡಾಗಿತ್ತು.ಸೋಮವಾರ ಮುಂಜಾನೆ 5 ರ ವೇಳೆಗೆ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಬೋಟು ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಚಿಂತನ್ ಬೊಕ್ಕಪಟ್ಣ(21) ಹಸೈನಾರ್ ಕಸ್ಬಾ ಬೆಂಗರೆ(25) ಅನ್ಸಾರ್ ಕಸ್ಬಾ ಬೆಂಗ್ರೆ(31) ಜಿಯಾವುಲ್ಲಾ ಕಸ್ಬಾ ಬೆಂಗ್ರೆ(32) ಉಳಿದ ನಾಪತ್ತೆಯಾದವರು.