9:32 AM Thursday3 - December 2020
ಬ್ರೇಕಿಂಗ್ ನ್ಯೂಸ್
ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ ಬುರವಿ ಚಂಡಮಾರುತದಿಂದ ಶ್ರೀಲಂಕಾದಲ್ಲಿ ವ್ಯಾಪಕ ಹಾನಿ, ಹಲವು ಮನೆಗಳಿಗೆ ಧ್ವಂಸ ಬೆಂಗಳೂರು ಹಿಂಸಾಚಾರ ಪ್ರಕರಣ: ಮಾಜಿ ಮೇಯರ್ ಆಪ್ತ, ಕಾರ್ಪೋರೇಟರ್ ಜಾಕೀರ್ ಬಂಧನ ಗ್ರಾಮ ಪಂಚಾಯಿತಿ ಚುನಾವಣೆ: ಶಸ್ತ್ರಾಸ್ತ್ರಗಳನ್ನು ಠೇವಣಿ  ಇಡಲು ಜಿಲ್ಲಾಧಿಕಾರಿ ಆದೇಶ  ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೆಸರಿನಲ್ಲಿ ನಕಲಿ ಫೇಸ್ ಬುಕ್… ಮಂಗಳೂರು ಏರ್ಪೋರ್ಟ್‌ಗೆ ಕೋಟಿ ಚೆನ್ನಯ ಹೆಸರಿಡುವಂತೆ ಆಗ್ರಹಿಸಿ ಡಿ.7ರಂದು ಬೈಕ್ ಜಾಥಾ ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ ಪರ್ಷಿಯನ್ ಬೋಟ್ ಅವಘಡದಲ್ಲಿ ಸಾವನ್ನಪ್ಪಿದವರ ಶೋಕಾರ್ಥ ಮಂಗಳೂರು ಮೀನು ಮಾರುಕಟ್ಟೆ ಬಂದ್

ಇತ್ತೀಚಿನ ಸುದ್ದಿ

ಪರಪ್ಪನ ಅಗ್ರಹಾರದ ಕಂಬಿಗಳ ಹಿಂದೆಯೇ ನಟಿ ಸಂಜನಾ ಹುಟ್ಟುಹಬ್ಬ

October 10, 2020, 11:22 AM

ಬೆಂಗಳೂರು(reporterkarnataka news): ಇಂದು ನಟಿ ಸಂಜನಾ ಹುಟ್ಟು ಹಬ್ಬ. ಕಳೆದ ವರ್ಷ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ನಟಿ ಸಂಜನಾ ಇದೀಗ ಜೈಲು ಹಕ್ಕಿ. ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. 

ಒಂದು ವರ್ಷದ ಅವಧಿಯಲ್ಲಿ ಊಹಿಸಲು ಅಸಾಧ್ಯವಾದ ಬದಲಾವಣೆ. ಕಳೆದ ಬಾರಿ ಪೈಪೋಟಿಗೆ ಬಿದ್ದು ತಮ್ಮ ಸ್ಟುಡಿಯೋಗಳಿಗೆ ಕರೆಯಿಸಿಕೊಂಡಿದ್ದ ಸುದ್ದಿ ವಾಹಿನಿಗಳು ಇಂದು ಸಂಜನಾ ಅವರನ್ನು ಖಳನಾಯಕಿಯಂತೆ ಚಿತ್ರೀಕರಿಸುತ್ತಿದ್ದಾರೆ.

ಇದು ಕಾಲದ ಮಹಿಮೆ. ಸಂಜನಾ ಅವರನ್ನು ಹೊಗಳಿ ಅಟ್ಟಕ್ಕೇರಿಸಿದ್ದ ಸ್ಟಾರ್ ನಿರೂಪಕರು ಇದೀಗ ಸಂಜನಾ ಗೊತ್ತೆ ಇಲ್ಲ ಎನ್ನುವ ಫೋಸ್ ಕೊಡುತ್ತಿದ್ದಾರೆ. ಪಂಚತಾರ  ಹೋಟೆಲ್ ಗಳಲ್ಲಿ ಸಂಜನಾ ಜತೆ ಡಿನ್ನರ್ ಪಾರ್ಟಿಗಳಲ್ಲಿ  ಕಾಣಿಸಿಕೊಂಡಿದ್ದ ಕೆಲವು ಚಲನ ಚಿತ್ರ ವರದಿಗಾರರು ತಮ್ಮ ಲಿಸ್ಟ್ ನಿಂದ ಸಂಜನಾ ಹೆಸರು ಅಳಿಸಿ ಹಾಕಿದ್ದಾರೆ ಎಂದು ಗಾಂಧಿ ನಗರದಲ್ಲಿ ಗುಸು ಗುಸು ಸುದ್ದಿ ಹರಿದಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು