8:46 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ಪಾಪ ಪ್ರಾಯಶ್ಚಿತವಾಗಿ ಬೆಳ್ಳಿಯ ಹೆಲಿಕಾಪ್ಟರ್ ಸಮರ್ಪಣೆ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಷ್ಟಕ್ಕೂ ಶಿವಕುಮಾರ್ ಮಾಡಿದ ಪಾಪವೇನು ಗೊತ್ತಾ..?

December 18, 2020, 2:56 PM

ಬಳ್ಳಾರಿ(reporterkarnataka news): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಹೂವಿನ ಹಡಗಲಿಯ ಮೈಲಾರ ಕ್ಷೇತ್ರಕ್ಕೆ ಭೇಟಿ ನೀಡಿ ಪಾಪ ಪ್ರಾಯಶ್ಚಿತ್ತಕ್ಕಾಗಿ ಮೈಲಾರಲಿಂಗನ ರುದ್ರಾಭಿಷೇಕ ಮತ್ತು ಪೂಜೆ ಸಲ್ಲಿಸಿದರು. ಜತೆಗೆ ದೇವರಿಗೆ ಬೆಳ್ಳಿಯ ಹೆಲಿಕಾಪ್ಟರ್ ಸಮರ್ಪಿಸಿದರು.

2017 ರಲ್ಲಿ ಡಿಕೆ ಶಿವಕುಮಾರ ಮಾಡಿದ್ದ ಪಾಪಕ್ಕೆ ಪ್ರಾಯಶ್ಚಿತ ಮಾಡಲಾಯಿತು.ಮೈಲಾರ ಗ್ರಾಮದ ಸುಕ್ಷೇತ್ರ ಮೈಲಾರಲಿಂಗೇಶ ಸ್ವಾಮಿ ದೇವಸ್ಥಾನಕ್ಕೆ 2017 ರಲ್ಲಿ ಹೆಲಿಕ್ಯಾಪ್ಟರ್ ಮೂಲಕ

 ಶಿವಕುಮಾರ್ ಆಗಮಿಸಿದ್ದರು. ಕಾರ್ಣಿಕ ನುಡಿಯುವ ವೇಳೆ ಭಕ್ತರ ಚಿತ್ತಕ್ಕೆ ಇದರಿಂದ ಶಬ್ಧ ಭಂಗ ಉಂಟಾಗಿತ್ತು. ರಾಜ್ಯದ ಮೂಲೆ ಮೂಲೆಯಿಂದ ಕಾಲ್ನಡಿಗೆಯಲ್ಲಿ ಮಾತ್ರ ಭಕ್ತರು ಬರುತ್ತಾರೆ.

ಆದರೆ ಶಿವಕುಮಾರ್ ಅವರು ಹೊಸಪೇಟೆಯಿಂದ ಹೆಲಿಕ್ಯಾಪ್ಟರ್ ಮೂಲಕ ಬಂದಿದ್ದರು. ಹೆಲಿಕಾಪ್ಟರ್ ಶಬ್ದದಿಂದ ಭಕ್ತರಿಗೆ ತೊಂದರೆ ಉಂಟಾಗಿತ್ತು. ಆಗ ಡಿಕೆಶಿ ಜೊತೆಗೆ ಹೆಲಿಕ್ಯಾಪ್ಟರ್ ನಲ್ಲಿ 

 ಶಾಸಕ ಪಿ.ಟಿ.ಪರಮೇಶ್ವರನಾಯ್ಕ್ ಕೂಡ ಬಂದಿದ್ದರು. ಪಿ.ಟಿ.ಪರಮೇಶ್ವರನಾಯ್ಕ್ ಮಂತ್ರಿಸ್ಥಾನ ಕಳಕೊಂಡರೆ, ಶಿವಕುಮಾರ ಮಂತ್ರಿಸ್ಥಾನ ಕಳಕೊಂಡು ಜೈಲು ಸೇರಿದರು.

ಇದೆಲ್ಲಾ ಮೈಲಾರಲಿಂಗನ ಶಾಪ ಎಂದು ದೇವಸ್ಥಾನದ ಧರ್ಮಧರ್ಶಿಗಳು ಹೇಳಿದ್ದರು. ಆದಷ್ಟು ಬೇಗ ಬಂದು ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು .ಇಲ್ಲವಾದರೆ ಭವಿಷ್ಯದಲ್ಲಿ ತೊಂದರೆ ಅಂತ ಧರ್ಮಧರ್ಶಿಗಳು ಮನವರಿಕೆ ಮಾಡಿದ್ದರು.

ಇಂದು ದೇವಸ್ಥಾನದ ಧರ್ಮದರ್ಶಿಗಳಾದ ವೆಂಕಟಪ್ಪ ಓಡೆಯರ್ ಅವರು ಮುಂದೆ ನಿಂತು ಪೂಜಾ ಕಾರ್ಯಗಳನ್ನು 

ನೆರವೇರಿಸಿದ್ದಾರೆ. ಹಾಗೆ ಶಿವಕುಮಾರ್ ಅವರು ಬೆಳ್ಳಿಯ ಹೆಲಿಕಾಪ್ಟರ್ ದೇವರಿಗೆ ಸಮರ್ಪಿಸಿದ್ದಾರೆ.

.

ಇತ್ತೀಚಿನ ಸುದ್ದಿ

ಜಾಹೀರಾತು