ಇತ್ತೀಚಿನ ಸುದ್ದಿ
ಪಂಜಾಬಿನ 29 ಶಾಸಕರಿಗೆ ಕೊರೊನಾ ಸೋಂಕು: ಇಂದು ವಿಧಾನಸಭೆ ಅಧಿವೇಶನ ಆರಂಭ
August 28, 2020, 2:42 AM

ಚಂಢೀಗಢ(reporterkarnataka news): ಪಂಜಾಬ್ ನಲ್ಲಿ ಮಾರಕ ಕೊರೊನಾ ಅಬ್ಬರಿಸಿದೆ. ರಾಜ್ಯದಲ್ಲಿ ಸಚಿವರ ಸೇರಿದಂತೆ 29 ಶಾಸಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದು ಆತಂಕ ಸೃಷ್ಟಿಸಿದೆ.
ರಾಜ್ಯ ವಿಧಾನಸಭೆಯ ಅಧಿವೇಶನ ಇಂದು ನಡೆಯಲಿದ್ದು, ಕೊರೊನಾ ಸೋಂಕಿತ ಸಚಿವರು ಮತ್ತು ಶಾಸಕರು ಕಲಾಪದಿಂದ ದೂರ ಉಳಿಯಬೇಕು ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.