1:03 AM Thursday25 - February 2021
ಬ್ರೇಕಿಂಗ್ ನ್ಯೂಸ್
ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ, ವಕೀಲ ಅಂತ ಹೇಳಿಕೊಳ್ಳಲು ನಾಚಿಗೆಯಾಗಬೇಕು: ಈಶ್ವರಪ್ಪ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ… ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ: ಡಿಸಿಎಂ ಡಾ. ಅಶ್ವಥನಾರಾಯಣ ಜನರು ಮಾಸ್ಕ್ ಧರಿಸದಿದ್ದರೆ ಮತ್ತೆ ಲಾಕ್ ಡೌನ್: ಮುಖ್ಯಮಂತ್ರಿ ನಾಗರಿಕರಿಗೆ ಎಚ್ಚರಿಕೆ

ಇತ್ತೀಚಿನ ಸುದ್ದಿ

ಹೊರ ಗುತ್ತಿಗೆ ಮಹಿಳಾ ಸಿಬ್ಬಂದಿಗಳ ಬೀದಿಗಿಳಿಸಲಿದೆ ಮಂಗಳೂರು ಮಹಾನಗರಪಾಲಿಕೆ ಆಡಳಿತ ! !

October 30, 2020, 9:58 AM

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು ಮಹಾನಗರಪಾಲಿಕೆಯಲ್ಲಿ ಆಡಳಿತ ಸುಧಾರಣೆ ಅಂದ್ರೆ ಬಡಪಾಯಿ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಇನ್ನಷ್ಟು ಕೆಲಸದ ಹೊರೆ ಹೊರಿಸುವುದು ಎಂದೇ ಅರ್ಥ. ಇದೀಗ ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕವೂ ಇದೇ ಸಂಪ್ರದಾಯ ಮುಂದುವರಿದಿದೆ. ಪಾಲಿಕೆಯ ಪ್ರಭುತ್ವದ ಕೆಂಗಣ್ಣಿಗೆ ಈ ಬಾರಿ ಎಂಜಿನಿಯರಿಂಗ್ ವಿಭಾಗದಲ್ಲಿ ತಿಂಗಳಿಗೆ 12 ಸಾವಿರ ರೂ. ಸಂಬಳಕ್ಕೆ ದುಡಿಯುವ ಮಹಿಳಾ ಸಿಬ್ಬಂದಿಗಳು ಗುರಿಯಾಗಿದ್ದಾರೆ.

ಪಾಲಿಕೆಯ ಎಂಜಿನಿಯರಿಂಗ್ ವಿಭಾಗದಲ್ಲಿ 34 ಮಂದಿ ಹೊರಗುತ್ತಿಗೆ ಸಿಬ್ಬಂದಿಗಳಿದ್ದಾರೆ. ಇವರಲ್ಲಿ 12 ಮಂದಿ ಮಹಿಳೆಯರು. ಈ 34 ಮಂದಿಯನ್ನು ಎಂಜಿನಿಯರ್ ವಿಭಾಗದಲ್ಲಿ ಎಂಜಿನಿಯರ್ ಗಳ ಸಹಾಯಕರಾಗಿ ಮತ್ತು ನೀರು ಸರಬರಾಜು ವಿಭಾಗದಲ್ಲಿ ಕಚೇರಿ ಸಹಾಯಕರಾಗಿ ನೇಮಿಸಲಾಗಿದೆಯೇ ಹೊರತು ವಾಲ್ವ್ ಮೆನ್ ಆಗಿ ಡೆಸಿಗ್ನೆನೇಶ್ ಕೊಟ್ಟಿಲ್ಲ. ಪಾಲಿಕೆ ಖಾಯಂ ಸಿಬ್ಬಂದಿಗಳಲ್ಲಿ ಅಂಡರ್ ಎಸ್ಸೆಸ್ಸೆಲ್ಸಿಗಳಿದ್ದರೂ ಈ ಹೊರಗುತ್ತಿಗೆ ಸಿಬ್ಬಂದಿಗಳೆಲ್ಲ ಪದವೀಧರರು. ಪಿಜಿ ಮಾಡಿದವರು ಕೂಡ ಇದ್ದಾರೆ. ಇವರೆಲ್ಲ ಕಳೆದ 15- 20 ವರ್ಷಗಳಿಂದ ಕಂಪ್ಯೂಟರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. 

ಹೊರಗುತ್ತಿಗೆ ಸಿಬ್ಬಂದಿಗಳನ್ನೆಲ್ಲ ಸಂಬಳ ಬಟಾವಣೆಯ ದೃಷ್ಟಿಯಿಂದ ವಾಲ್ವ್ ಮೆನ್ ಗಳ ಲಿಸ್ಟ್ ಗೆ  ಸೇರಿಸಲಾಗಿದೆ. ಇದನ್ನೇ ಇಲ್ಲಿನ ಕೆಲವು ಜನಪ್ರತಿನಿಧಿಗಳು ಅವರ ನೇಮಕಾತಿ ವಾಲ್ವ್ ಮೆನ್ ಎಂದು ವಾದ ಮಾಡುತ್ತಾರೆ. ನಮ್ಮ ಗ್ರೇಟ್ ಮಹಾನಗರಪಾಲಿಕೆ ಅಡಿಯಲ್ಲಿ ಇವರಿಗೆ ನೀಡುವುದು ಬರೇ 12 ಸಾವಿರ ಸಂಬಳ. ಪಿಎಫ್, ಪ್ರೊಫೆಶನಲ್ ಟ್ಯಾಕ್ಸ್ ಕಟ್ ಆಗಿ ಸಿಗುವುದು 11 ಸಾವಿರ ರೂಪಾಯಿ. ಇದಕ್ಕಿಂತ ಹೆಚ್ಚು ಇಲ್ಲಿನ ಕೆಲವು ಖಾಯಂ ಸಿಬ್ಬಂದಿಗಳು ದಿನದ ಕಮಾಯಿ ಮಾಡುತ್ತಾರೆ ಎನ್ನುವುದು ಗೋಡೆ ಬರಹದಷ್ಟೇ ಸ್ಪಷ್ಟ. ಆದರೆ ಪಾಲಿಕೆ ಪ್ರಭುತ್ವಕ್ಕೆ ಇದು ಯಾವುದೂ ಕಾಣಿಸುವುದಿಲ್ಲ. ಬಡಪಾಯಿ ಹೊರಗುತ್ತಿಗೆ ಸಿಬ್ಬಂದಿಗಳೇ ಇವರಿಗೆ ಟಾರ್ಗೆಟ್. ಈಗ ವಿಷಯವೇನೆಂದರೆ ಎಂಜಿನಿಯರಿಂಗ್ ವಿಭಾಗದಲ್ಲಿ ದುಡಿಯುತ್ತಿರುವ 34 ಮಂದಿ ಹೊರಗುತ್ತಿಗೆ ಸಿಬ್ಬಂದಿಗಳಲ್ಲಿ ಇರುವ 12 ಮಂದಿ ಮಹಿಳಾ ಸಿಬ್ಬಂದಿಗಳಲ್ಲಿ ಮೂವರಿಗೆ ವಾಟರ್ ಮೀಟರ್ ರೀಡಿಂಗ್ ಗೆ ಫೀಲ್ಡ್ ಗೆ ಇಳಿಸುವ ಯೋಜನೆ ರೂಪಿಸಲಾಗಿದೆ. ಈ ಕುರಿತು ಆಡಳಿತದಿಂದ ನಿರ್ಣಯ ಕೂಡ ಕೈಗೊಳ್ಳಲಾಗಿದೆ.

ಫೀಲ್ಡ್ ಕೆಲಸವೆಂದರೆ ಪುರುಷರ ಹಾಗೆ ಇವರು ಮನೆ ಮನೆಗೆ ತೆರಳಿ ಮೀಟರ್ ರೀಡಿಂಗ್ ಮಾಡಿ ಬಿಲ್ ಕೊಡುವ ಕೆಲಸ ಮಾಡಬೇಕು. ಕೆಲವು ಕಡೆಗಳಲ್ಲಿ ನಾಯಿ ಅಟ್ಟಾಡಿಸಿಕೊಂಡು ಬಂದರೆ ಶರವೇಗದಲ್ಲಿ ಓಡಿ ತಪ್ಪಿಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಕೆಲವು ಕಡೆ ಮೀಟರ್ ಗಳಲ್ಲಿ ಹಾವು ಸೇರಿದಂತೆ ವಿಷಜಂತುಗಳು ಕೂಡ ಇರುತ್ತದೆ. ಬೆಳಗ್ಗೆ 8 ಗಂಟೆಯಿಂದ ಇವರ ಡ್ಯೂಟಿ ಪ್ರಾರಂಭವಾಗಿ 11 ಗಂಟೆಗೆ ಮುಕ್ತಾಯಗೊಳಿಸಿ ಮತ್ತೆ ಕಚೇರಿಗೆ ಬಂದು ಆಫೀಸ್ ಕೆಲಸ ಮಾಡಬೇಕು. ಆದರೆ ಸಿಗುವ ಸಂಬಳ ಮಾತ್ರ 12 ಸಾವಿರ. ತಿಂಗಳಿಗೆ 40ರಿಂದ 60 ಸಾವಿರದ ವರೆಗೆ ಸಂಬಳ ಪಡೆಯುವ ಪಾಲಿಕೆಯ ಖಾಯಂ ಸಿಬ್ಬಂದಿಗಳು ಕೂಡ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಇದಲ್ಲದೆ ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಹೆಚ್ಚಿನ ಸಿಬ್ಬಂದಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಹತೆ ಹೊಂದಿದವರು ಆಗಿರುತ್ತಾರೆ. ಇವರನ್ನೆಲ್ಲ ಪಾಲಿಕೆಯಲ್ಲಿ ಖಾಲಿ ಇರುವ ವಾಲ್ವ್ ಮೆನ್ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗಿದೆ. ಆದರೆ ಹೆಚ್ಚಿನ ಸಿಬ್ಬಂದಿಗಳು ಕಚೇರಿಯಲ್ಲಿ ಜವಾನರಾಗಿ ದುಡಿಯುತ್ತಿದ್ದಾರೆ. ಇವರನ್ನೆಲ್ಲ ಫೀಲ್ಡಿಗಿಳಿಸಲು ಅವಕಾಶವಿದ್ದರೂ ಮೇಯರ್ ಮತ್ತು ಅವರ ಟೀಮ್ ಕೈಕಟ್ಟಿ ಕುಳಿತಿದೆ. 

ಪಾಲಿಕೆಯ ಆಡಳಿತ ಎಷ್ಟು ಸಡಿಲವಾಗಿದೆ ಎಂದರೆ ಇತ್ತೀಚೆಗೆ ಡಾಟಾ ಎಂಟ್ರಿ ಆಪರೇಟರ್ ಗಳಿಗೆ ನಡೆಸಿದ ಮರು ಪರೀಕ್ಷೆಯೇ ಸಾಕ್ಷಿ. 34 ಮಂದಿ ಡಾಟಾ ಎಂಟ್ರಿಗಳ ಗುತ್ತಿಗೆದಾರ ಕಂಪನಿ ಬದಲಾಗುವ ಸಂದರ್ಭದಲ್ಲಿ ಏನೆಲ್ಲ ಕಾರಣ ಕೊಟ್ಟು ಡಾಟಾ ಎಂಟ್ರಿಗಳಿಗೆ ಮರು ಪರೀಕ್ಷೆ ನಡೆಸಲಾಗಿದೆ. ಪಾಲಿಕೆಗೆ ತನ್ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ತಮ್ಮ ಕಚೇರಿಯಲ್ಲಿ ಎಕ್ಸಾಂ ನಡೆಸುವಷ್ಟು ಶಕ್ತಿಯೂ ಇಲ್ಲ. ಪಾಲಿಕೆ ಕಚೇರಿ ಪಕ್ಕದಲ್ಲಿರುವ ಖಾಸಗಿ ಸೈಬರ್ ನಲ್ಲಿ ಟೈಪಿಂಗ್ ಸ್ಪೀಡ್ ಬಗ್ಗೆ ಎಕ್ಸಾಂ ನಡೆಸಲಾಗಿದೆ. ಇಲ್ಲಿ ಯಾವ ರೀತಿಯ ಅವ್ಯವಹಾರ ನಡೆದಿದೆ ಎನ್ನುವುದು ದೇವರಿಗೆ ಮಾತ್ರ ಗೊತ್ತು. ಜನಪ್ರತಿನಿಧಿಗಳಲ್ಲಿ ಮಾತನಾಡಿಸಿದರೆ, ಹೊರಗುತ್ತಿಗೆ ಸಿಬ್ಬಂದಿಗಳ ಕಾನೂನು ಬಗ್ಗೆ ಮಾತನಾಡುತ್ತಾರೆ. ಆದರೆ ಪಾಲಿಕೆ ಕಚೇರಿಯ ಮೂಗಿನಡಿಯಲ್ಲೇ ಫುಟ್ ಪಾತನ್ನೇ ಆಕ್ರಮಿಸಿ ವ್ಯಾಪಾರ ಮಾಡುವವರನ್ನು ತೆರವು ಮಾಡಲು ಸಾಧ್ಯವಾಗಲಿಲ್ಲ. 

ಎಂಜಿನಿಯರ್ ವಿಭಾಗದ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮೀಟರ್ ರೀಡಿಂಗ್ ಗೆ ಹಾಕಲು ನಿರ್ಣಯ ಮಾಡಲಾಗಿದೆ. ಇದರಲ್ಲಿ ಮಹಿಳಾ ಸಿಬ್ಬಂದಿಗಳನ್ನು ಹಾಕಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಪುನರ್ ಪರಿಶೀಲನೆ ನಡೆಸುವ ಬಗ್ಗೆ ಚಿಂತನೆ ಇದೆ.

  • ಶರತ್ ಕುಮಾರ್, ಮಂಗಳೂರು ಮಹಾನಗರಪಾಲಿಕೆ ಪಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ

ಇತ್ತೀಚಿನ ಸುದ್ದಿ

ಜಾಹೀರಾತು