10:25 AM Friday27 - November 2020
ಬ್ರೇಕಿಂಗ್ ನ್ಯೂಸ್
ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ ಚಿಕ್ಕಬಳ್ಳಾಪುರದ ಬಳಿ ಕಾರುಗಳಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ  ಕ್ಯಾಂಟರ್ : ನಾಲ್ವರ… ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ನಾಳೆ ಸಂಸದರ ಸಭೆ ಕರೆದ ಸಿಎಂ ಯಡಿಯೂರಪ್ಪ

ಇತ್ತೀಚಿನ ಸುದ್ದಿ

ಪಾಲಿಕೆಗೆ ಐಎಎಸ್ ಕಮಿಷನರ್ : ಇದು ಮಂಗಳೂರಿಗರ ಬಹುದಿನಗಳ ಕನಸು

August 25, 2020, 11:50 AM

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಮಂಗಳೂರು ಮಹಾನಗರಪಾಲಿಕೆಗೆ ಐಎಎಸ್ ಕಮಿಷನರ್ ಭಾಗ್ಯ ಮತ್ತೆ ಒದಗಿ ಬಂದಿದೆ. ಅಕ್ಷಯ್ ಶ್ರೀಧರ್ ನೂತನ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಬೆರಳೆಣಿಕೆಯ ಐಎಎಸ್ ಅಧಿಕಾರಿಗಳು ಕಿರು ಅವಧಿಯಲ್ಲಿ ಇಲ್ಲಿ ಅಧಿಕಾರ ನಡೆಸಿದ್ದು ಬಿಟ್ಟರೆ ಮಿಕ್ಕೆಲ್ಲ ಐಎಎಸ್, ಕೆಎಎಸ್ಸೇತರ ಅಧಿಕಾರಿಗಳೇ ಅಧಿಕಾರ ಚಲಾಯಿಸಿದ್ದು ಹೆಚ್ಚು.

ಇತ್ತೀಚಿಗಿನ ವರ್ಷಗಳಲ್ಲಿ ಹೆಪ್ಸಿಬಾರಾಣಿ ಕೊರ್ಲಪತಿ ಎಂಬ ಮಹಿಳಾ ಐಎಎಸ್ ಅಧಿಕಾರಿ ಕೆಲವೇ ಕೆಲವು ದಿನಗಳ ಕಾಲ ಪಾಲಿಕೆ ಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಬಿಟ್ಟರೆ ಒಂದಿಬ್ಬರು ಐಎಎಸ್ ಗಳು ಮಾತ್ರ ಕೆಲವು ವರ್ಷ ಇಲ್ಲಿ ಅಧಿಕಾರ ನಡೆಸಿದ್ದಾರೆ. ಐಎಎಸ್ ಅಧಿಕಾರಿಗಳು ಪಾಲಿಕೆ ಕಮೀಷನರ್ ಆಗಿರುವುದು ಕಡಿಮೆ ಅಂದ್ರೆ ಮಂಗಳೂರು ಮಹಾನಗರಪಾಲಿಕೆಗೆ ಅವರೇನು ಬರಲು ಕೇಳುತ್ತಿರಲಿಲ್ಲ ಎಂದು ಅರ್ಥವಲ್ಲ, ಬದಲಿಗೆ ರಾಜ್ಯ ಸರಕಾರ, ಸ್ಥಳೀಯ ಪ್ರಭುತ್ವ ಐಎಎಸ್ ಗಳಿಗೆ ಅವಕಾಶ ನೀಡಿದ್ದು ಬಹಳ ಕಡಿಮೆ.

ಮಂಗಳೂರು ಮಹಾನಗರಪಾಲಿಕೆಯ ಚುನಾಯಿತ ಆಡಳಿತಕ್ಕೆ ಮೊದಲಿನಿಂದಲೂ ಐಎಎಸ್ ಕಮಿಷನರ್ ಜತೆ ಸಂಬಂಧ ಕೂಡಿ ಬರುತ್ತಿರಲಿಲ್ಲ. ಮೇಯರ್ ಹಾಗೂ ಕಾರ್ಪೊರೇಟರ್ ಗಳಿಗೆ ಐಎಎಸ್ ಗಳನ್ನು ಅಂಕೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದಿರುವುದೇ ಇದಕ್ಕೆಲ್ಲ ಕಾರಣ. 

ಹೆಪ್ಸಿಬಾ ರಾಣಿ ಕೊರ್ಲಪತಿ ಒಳ್ಳೆಯ ಆಡಳಿತಗಾರ್ತಿ ಆಗಿದ್ದರೂ ಮೇಯರ್ ಹಾಗೂ ಕಾರ್ಪೊರೇಟರ್ ಗಳಿಗೆ 

ಅವರನ್ನು ತಮಗೆ ಬೇಕಾದ ಶೈಲಿಯಲ್ಲಿ ಆಡಳಿತ ನಡೆಸುವಂತೆ ಮಾಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಹಠಾತ್ ವರ್ಗಾವಣೆ. ಏನಿದ್ದರೂ ಕಾನೂನು ಪ್ರಕಾರ ಕಾರ್ಯನಿರ್ವಹಿಸುವ 

ಕೊರ್ಲಪತಿ ಅವರ ಛಾತಿ ಅಂದಿನ ಪಾಲಿಕೆಯ ಅಧಿಕಾರಸ್ಥರಿಗೆ ಸರಿ ಕಾಣಲಿಲ್ಲ. ಇವೆಲ್ಲದರ ಪರಿಣಾಮ ಕೊರ್ಲಪತಿ ಅವರು ಸಂಪೂರ್ಣ ಲಗೇಜ್ ಬಿಚ್ಚುವ ಮುನ್ನವೇ ವರ್ಗಾವಣೆಗೊಂಡರು. ನಂತರ ಹಾಗೂ ಅದಕ್ಕಿಂತ ಮುನ್ನ ಬಂದ ಹೆಚ್ಚಿನ ಕಮಿಷನರ್ ಗಳು ಐಎಎಸ್ ಯೇತರ ಅಧಿಕಾರಿಗಳು ಎಂಬುವುದು ಗಮನಾರ್ಹ. ಇವರಲ್ಲಿ ಕೆಲವರು ಕೆಎಎಸ್ ಅಧಿಕಾರಿಗಳಿದ್ದರು.

ದಕ್ಷಿಣ ಕನ್ನಡಕ್ಕೆ ಬಂದ ಜಿಲ್ಲಾಧಿಕಾರಿಗಳ ಪೈಕಿ ಭರತ್ ಲಾಲ್ ಮೀನಾ ಹಾಗೂ ವಿ. ಪೊನ್ನುರಾಜ್ ಅವರು ಹೇಗೆ ಜನಮಾನಸದಲ್ಲಿ ಇದುವರೆಗೆ ಉಳಿದುಕೊಂಡಿದ್ದಾರೆಯೋ ಅದೇ ರೀತಿ ಪಾಲಿಕೆ ಕಮಿಷನರ್ ಆಗಿದ್ದವರಲ್ಲಿ ಮಂಗಳೂರಿಗರು ನೆನಪಿಸಿಕೊಳ್ಳುವ ಹೆಸರುಗಳೆಂದರೆ ಹರೀಶ್ ಕುಮಾರ್ ಹಾಗೂ ಹರ್ಷಾ ಗುಪ್ತಾ ಮಾತ್ರ. ಆದರೆ ಈ ಇಬ್ಬರು ಅಧಿಕಾರಿಗಳನ್ನು ಕೂಡ ಅಧಿಕಾರದಲ್ಲಿ ಹೆಚ್ಚು ದಿನ ಮುಂದುವರಿಯಲು ಇಲ್ಲಿನ ಲಾಬಿಗಳು ಬಿಡಲಿಲ್ಲ.

ಸಾಮಾನ್ಯವಾಗಿ ಐಎಎಸ್ ಅಧಿಕಾರಿಗಳು ಕಮಿಷನರ್ ಆಗಿ ಬಂದರೆ ಮೇಯರ್ ಹಾಗೂ ಕಾರ್ಪೊರೇಟರ್ ಗಳ ಮಾತು ಹೆಚ್ಚು ನಡೆಯುವುದಿಲ್ಲ. ಮೇಯರ್ ಗೆ ಕ್ಯಾಬಿನೆಟ್ ಸಚಿವರ ಸ್ಥಾನಮಾನ ಇಲ್ಲದ ಕಾರಣ ಐಎಎಸ್ ಕಮಿಷನರ್ ಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಹಿಂದಿನ ಅಧಿಕಾರಸ್ಥರು ಪಾಲಿಕೆಗೆ ಐಎಎಸ್ ಕಮಿಷನರ್ ನೇಮಕಕ್ಕೆ ಅವಕಾಶ ನೀಡುತ್ತಿರಲಿಲ್ಲ ಎನ್ನುವುದು ಸತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು