4:47 PM Saturday28 - November 2020
ಬ್ರೇಕಿಂಗ್ ನ್ಯೂಸ್
ಕಲ್ಲಿದ್ದಲು ಮಾಫಿಯಾ: ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಸಿಬಿಐ ದಾಳಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 86 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶ ಕಂದಾಯ ಸಚಿವ ಆರ್. ಅಶೋಕ್ ದೆಹಲಿಯಲ್ಲಿ ರೈಲ್ವೆ ಸಚಿವರ ಭೇಟಿ  ಕೊರೊನಾ ಲಸಿಕೆ ಅಭಿವೃದ್ಧಿ: ಇಂದು ಸಂಶೋಧನಾ ಸಂಸ್ಥೆಗಳಿಗೆ ಪ್ರಧಾನಿ ಮೋದಿ ಭೇಟಿ ಮೆಹಬೂಬ ಮುಫ್ತಿ ಗೃಹಬಂಧನದಲ್ಲಿ ಇಲ್ಲ:  ಜಮ್ಮು- ಕಾಶ್ಮೀರ ಸರಕಾರ ಸ್ಪಷ್ಟನೆ ಆತ್ಮಹತ್ಯೆಗೆ ಯತ್ನಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಗೆ ಮುಂದುವರಿದ ಚಿಕಿತ್ಸೆ ರಾಜಕೀಯ ಒತ್ತಡದಿಂದ ಸಂತೋಷ್ ಆತ್ಮಹತ್ಯೆಗೆ ಯತ್ನ: ಪತ್ನಿ ಜಾಹ್ನವಿ ಆರೋಪ ಉಗ್ರ ಸಂಘಟನೆ ಪರ ಗೋಡೆ ಬರಹದ ತನಿಖೆಗೆ ಪ್ರತ್ಯೇಕ ತಂಡ ರಚನೆ: ಪೊಲೀಸ್ ಯಕ್ಷಗಾನ ದೇವ ಪರಂಪರೆಯ ಮೂಲ ಕಲೆಯಾಗಿದ್ದು ಅಧ್ಯಯನ ಅಗತ್ಯ: ನಿತ್ಯಾನಂದ  ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ

ಇತ್ತೀಚಿನ ಸುದ್ದಿ

ಪಾಲಿಕೆ ಜಂಟೀ ಆಯುಕ್ತರ ಹೆಸರಿನ ನಕಲಿ ಫೇಸ್ಬುಕ್ ಐಡಿ ಸೃಷ್ಟಿ: ಸೈಬರ್ ಠಾಣೆಗೆ ದೂರು

November 18, 2020, 10:41 PM

ಮಂಗಳೂರು(reporterkarnataka news)
ಮಂಗಳೂರು ಮಹಾನಗರ ಪಾಲಿಕೆ ಜಂಟೀ ಆಯುಕ್ತ ಡಾ.ಸಂತೋಷ್ ಕುಮಾರ್  ಹೆಸರಿನ ನಕಲಿ ಫೇಸ್ಬುಕ್ ಐಡಿ ಸೃಷ್ಟಿಸಿ ವಂಚಿಸಿದ ಕುರಿತು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಡಾ. ಸಂತೋಷ್ ಕುಮಾರ್ ಅವರ ನಕಲಿ ಐಡಿ ಸೃಷ್ಟಿಸಿ ಖದೀಮರು ಫೇಸ್ಬುಕ್ ಮೆಸೆಂಜರ್ ಮೂಲಕ ಅವರ ಗೆಳೆಯರಿಗೆ ಹಣ ನೀಡುವಂತೆ ಮೆಸೇಜ್ ಕಳುಹಿಸುತ್ತಿದ್ದರು. ಗೆಳೆಯ ಮಗುವಿಗೆ ಹುಷಾರಿಲ್ಲ, ತುರ್ತು ಹಣ ಬೇಕು ಮುಂತಾದ ಕಾರಣಗಳನ್ನು ನೀಡಿ ಮೆಸೇಜ್ ರವಾನಿಸಲಾಗುತ್ತಿತ್ತು. ಈ ಕುರಿತು ಜಂಟೀ ಆಯುಕ್ತರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್ ರಿಗೆ ಕೂಡ ದೂರಿನ ಪ್ರತಿ ಕಳುಹಿಸಲಾಗಿದೆ.

ಪ್ರಸ್ತುತ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜಂಟೀ ಆಯುಕ್ತ (ಆಡಳಿತ) ಹುದ್ದೆ ನಿರ್ವಹಿಸುತ್ತಿರುವ ಸಂತೋಷ್ ಅವರು ದಕ್ಷ ಅಧಿಕಾರಿ ಎಂದೇ ಪ್ರಸಿದ್ಧರಾದವರು. ಹಾಗೆ ಉತ್ತಮ ಆಡಳಿತಗಾರ ಕೂಡ ಹೌದು.

ಇತ್ತೀಚಿನ ಸುದ್ದಿ

ಜಾಹೀರಾತು