ಇತ್ತೀಚಿನ ಸುದ್ದಿ
ಪಾಲ್ದನೆ ಸಂತ ತೆರೆಸಾ ಚರ್ಚ್ ವ್ಯಾಪ್ತಿಯ 17 ಮಕ್ಕಳಿಗೆ ಪ್ರಥಮ ಕ್ರೈಸ್ತ ಪ್ರಸಾದ ವಿತರಣೆ
January 3, 2021, 8:25 PM

ಮಂಗಳೂರು(reporterkarnataka news): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ವ್ಯಾಪ್ತಿಯಲ್ಲಿರುವ 17 ಮಂದಿ ಮಕ್ಕಳಿಗೆ ಪ್ರಥಮವಾಗಿ ಕ್ರೈಸ್ತ ಪ್ರಸಾದವನ್ನು ನೀಡಲಾಯಿತು.
ಬಲಿಪೂಜೆ ನೇತೃತ್ವವನ್ನು ಚರ್ಚ್ ನ ಧರ್ಮಗುರುಗಳಾದ ವಂದನೀಯ ಅಲ್ವಿನ್ ಡಿಸೋಜ ಅವರು ವಹಿಸಿದ್ದರು. ಪ್ರವಚನ ನೀಡಿದ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ಸಿಲ್ವೆಸ್ಟರ್ ಡಿಕೋಸ್ತ ಅವರು ಮಾತನಾಡಿ, ಪವಿತ್ರ ಪ್ರಸಾದದ ಪವಿತ್ರತೆ ಹಾಗೂ ಅದರ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಬಲಿಪೂಜೆಯ ಸಹಭಾಗಿತ್ವವನ್ನು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಂದನೀಯ ಡಾ. ವಿಲ್ಪ್ರೆಡ್ ಪ್ರಕಾಶ್ ಡಿಸೋಜ, ಫಾ. ರೋಹಿತ್ ಡಿಕೋಸ್ತ, ಫಾ. ದೀಪಕ್ ಅವರು ನೀಡಿದರು.
ಮಕ್ಕಳಿಗೆ ತರಬೇತಿ ನೀಡಿದ ಸಿಸ್ಟರ್ ಸೋನಾಲ್ ಪಿಂಟೋ, ಚರ್ಚಿನ ಉಪಾಧ್ಯಕ್ಷ ವಿಲಿಯಂ ಲೋಬೊ ಹಾಗೂ ಕಾರ್ಯದರ್ಶಿ ಆಸ್ಟಿನ್ ಮೊಂತೊರೊ ಉಪಸ್ಥಿತರಿದ್ದರು.