ಇತ್ತೀಚಿನ ಸುದ್ದಿ
ಪಡುಪಣಂಬೂರು: 8ರ ಹರೆಯದ ಮಗುವಿನ ಜತೆ ವಿಷ ಸೇವಿಸಿ ದಂಪತಿ ಆತ್ಮಹತ್ಯೆ
December 14, 2020, 4:58 PM

ಹಳೆಯಂಗಡಿ(reporterkarnataka news) :
ಪಡುಪಣಂಬೂರು ಕಲ್ಲಾಪು ರೈಲ್ವೆ ಗೇಟ್ ಬಳಿಯ ಬಾಡಿಗೆ ಮನೆವೊಂದರಲ್ಲಿ ಒಂದು ಕುಟುಂಬದ ಮೂವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಮೃತರನ್ನು ವಿನೋದ್ ಸಾಲ್ಯಾನ್ (40), ಪತ್ನಿ ರಚನಾ (38), ಮಗು ಸಾಧ್ಯ (8) ಎಂದು ಗುರುತಿಸಲಾಗಿದೆ.
ಮೃತ ವಿನೋದ್ ಸಾಲ್ಯಾನ್ ಮುಂಬೈಯಲ್ಲಿ ಕೆಲಸಕ್ಕಿದ್ದು ಕಳೆದ ಒಂದು ವರ್ಷದ ಹಿಂದೆ ಹಳೆಯಂಗಡಿ ಸಮೀಪದ ಪಡು ಪಣಂಬೂರು ಬೆಳ್ಳಾಯರು ಕಲ್ಲಾಪು ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಕಳೆದೆರಡು ದಿನಗಳಿಂದ ವಿನೋದ್ ಸಾಲ್ಯಾನ್ ಕುಟುಂಬದ ಮಂದಿ ಹೊರಗೆ ಬರದೇ ಇದ್ದುದನ್ನು ಕಂಡು ನೆರೆಮನೆಯವರು ಮನೆಯ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಪರಿಸ್ಥಿತಿಯಲ್ಲಿ ಕಂಡು ಬಂದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.