ಇತ್ತೀಚಿನ ಸುದ್ದಿ
ಆಕ್ಸ್ ಫರ್ಡ್ ಲಸಿಕೆ ಪ್ರಯೋಗದ ವೇಳೆ ದುರಂತ: ಬ್ರೆಜಿಲ್ ನಲ್ಲಿ ಓರ್ವ ಬಲಿ
October 22, 2020, 8:18 AM

ಲಂಡನ್: ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಂಶೋಧಿಸುತ್ತಿರುವ ಲಸಿಕೆ ಪ್ರಯೋಗಕ್ಕೆ ತುತ್ತಾದ ವ್ಯಕ್ತಿಯೊಬ್ಬರು ಬ್ರೆಜಿಲ್ ನಲ್ಲಿ ಮೃತಪಟ್ಟಿದ್ದಾರೆ. 28ರ ಹರೆಯದ ವೈದ್ಯ ಈ ಲಸಿಕೆ ಪ್ರಯೋಗದಲ್ಲಿ ಭಾಗಿಯಾಗಿದ್ದರು. ಘಟನೆ ಕುರಿತಂತೆ ಸ್ವತಂತ್ರ ತನಿಖೆ ಪೂರ್ಣಗೊಂಡಿದೆ. ಲಸಿಕೆಯಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಪ್ರಯೋಗ ಮುಂದುವರಿಸುವಂತೆ ಇದೀಗ ಸೂಚಿಸಿದೆ.