ಇತ್ತೀಚಿನ ಸುದ್ದಿ
ಹೆಚ್ಚುತ್ತಿರುವ ಆನ್ ಲೈನ್ ಸಾಲ ವಂಚನೆ ಪ್ರಕರಣ: ಗ್ರಾಹಕರು ಹೇಗೆ ಎಚ್ಚರ ವಹಿಸಬೇಕು?
September 30, 2020, 9:09 AM

ನವದೆಹಲಿ(reporterkarnataka news): ಬೆಳ್ಳಂಬೆಳ್ಳಗೆ ಹಾಸಿಗೆಯಿಂದ ಎದ್ದು ಕಣ್ಣು ಉಜ್ಜಿ ಮೊಬೈಲ್ ನೋಡಿದಾಗ ನಿಮ್ಮಗೆ ಒಂದು ಅಚ್ಚರಿ ಕಾದಿರುತ್ತದೆ ಇತ್ತೀಚಿನ ದಿನಗಳಲ್ಲಿ. ಅದು ಬೇರೆ ಏನೂ ಅಲ್ಲ. ಮೂರು ಲಕ್ಷ ರೂಪಾಯಿ ಸಾಲ ನಿಮ್ಮಗೆ ಮಂಜೂರಾಗಿದೆ. ಈ ಲಿಂಕ್ ಫಾಲೋ ಮಾಡಿ ಎಂದು ಸೂಚಿಸಲಾಗುತ್ತಿದೆ.
ಇಂತಹ ಹೆಚ್ಚಿನ ಪ್ರಕರಣಗಳಲ್ಲಿ ವಂಚನೆ ಎಸಗುತ್ತಿರುವುದನ್ನು ಕೇರಳದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಾಲದ ಮೊತ್ತ ಬಿಡುಗಡೆ ಮಾಡಲು ಆರಂಭಿಕ ಹಂತದಲ್ಲಿ ಸ್ವಲ್ಪ ಹಣ ಪಾವತಿಸಬೇಕು ಎಂಬ ಸಂದೇಶ ಬರುತ್ತದೆ. ಹೀಗೆ ಎರಡು ಮೂರು ಹಂತಗಳಲ್ಲಿ ನಿಮ್ಮಿಂದ ಹಣ ಪಡೆದ ಬಳಿಕ ಆರೋಪಿಗಳು ಕಣ್ಮರೆಯಾಗುತ್ತಾರೆ.
ಬಹುತೇಕ ಆನ್ ಲೈನ್ ಸಾಲ ಮಂಜೂರಾತಿ ಸಂಸ್ಥೆಗಳು ಈ ರೀತಿ ವಂಚನೆಯಲ್ಲಿ ತೊಡಗಿವೆ ಎಂಬ ಆರೋಪ ಕೇಳಿ ಬಂದಿದೆ. ಪಂಜಾಬ್ ನಲ್ಲಿ ಕುಳಿತು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ