ಇತ್ತೀಚಿನ ಸುದ್ದಿ
ಆನ್ ಲೈನ್ ಕ್ಲಾಸ್ ರದ್ದು: ತಕ್ಷಣ ಸಮಸ್ಯೆ ಪರಿಹಾರಕ್ಕೆ ಶಿಕ್ಷಣ ಸಚಿವರಿಗೆ ಸಿಎಂ ಸೂಚನೆ
December 21, 2020, 1:56 PM

ಬೆಂಗಳೂರು(reporterkarnataka news): ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಕ್ಲಾಸ್ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ತಲೆದೋರಿರುವ ಎಲ್ಲ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.
ಸರ್ಕಾರದ ಧೋರಣೆ ಖಂಡಿಸಿ ರುಪ್ಸಾ ಇಂದಿನಿಂದ ಆನ್ ಲೈನ್ ಶಿಕ್ಷಣ ರದ್ದುಪಡಿಸಿದೆ. 40,000ಕ್ಕೂ ಹೆಚ್ಚು ಶಾಲೆಗಳು ಸಂಘಟನೆಯ ಕರೆ ಹಿನ್ನೆಲೆಯಲ್ಲಿ ಆನ್ ಲೈನ್ ಶಿಕ್ಷಣ ರದ್ದುಪಡಿಸಿವೆ ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ತಕ್ಷಣ ಸಮಸ್ಯೆ ಬಗೆಹರಿಸಲು ಮುಂದಾಗುವಂತೆ ಶಿಕ್ಷಣ ಸಚಿವರಿಗೆ ಸೂಚಿಸಿದ್ದಾರೆ.