ಇತ್ತೀಚಿನ ಸುದ್ದಿ
ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ
November 24, 2020, 10:31 AM

ನವದೆಹಲಿ(reporterkarnataka news): ದೇಶದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ 37.975 ಮಂದಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ.
ಕೊರೊನಾ ಒಂದೇ ದಿನ 480 ಮಂದಿಯ ಬಲಿಪಡೆದು ಕೊಂಡಿದೆ. ಕೊರೊನಾ ಇದುವರೆಗೆ 1,34,218 ಮಂದಿಯ ಪ್ರಾಣ ಕಸಿದುಕೊಂಡಿದೆ. ಕೊರೊನಾ ಸೋಂಕಿತರ ಸಂಖ್ಯೆ 91, 77, 841ಕ್ಕೆ ತಲುಪಿದೆ. ಕೊರೊನಾದಿಂದ 86,04, 955 ಮಂದಿ ಗುಣಮುಖರಾಗಿದ್ದಾರೆ.
ಕೊರೊನಾ ಸೋಂಕಿಗೆ ತುತ್ತಾಗಿರುವ 4,38.667 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ 42, 314 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.