ಇತ್ತೀಚಿನ ಸುದ್ದಿ
ಒಂದೇ ದಿನ 22272 ಮಂದಿಗೆ ಕೊರೊನ ಸೊಂಕು: 251 ಬಲಿ, 2,81,667 ಮಂದಿ ಚಿಕಿತ್ಸೆ
December 26, 2020, 1:46 PM

ನವದೆಹಲಿ(reporterkarnataka news):
ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 22272 ಮಂದಿಗೆ ಕೊರೊನ ಸೊಂಕು ತಗುಲಿದೆ. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 1,01,69,118 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನ 251 ಮಂದಿಯ ಪ್ರಾಣ ಬಲಿಪಡೆದುಕೊಂಡಿದೆ. ಕೊರೋನಕ್ಕೆ ದೇಶದಲ್ಲಿ ಸತ್ತವರ ಸಂಖ್ಯೆ 147343 ಕ್ಕೆ ತಲುಪಿದೆ. ದೇಶದ ವಿವಿಧ ಆಸ್ಪತ್ರೆಗಳಲ್ಲಿ 2,81,667 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.