ಇತ್ತೀಚಿನ ಸುದ್ದಿ
ಓಣಂ ಸೀರೆಯಲ್ಲಿ ಮಿಂಚಿದ ನೀರೆಯರು!!: ವಾಟ್ಸಾಪ್ ಸ್ಟೇಟಸ್ ನಲ್ಲೂ ಅದೇ ಝಳಕ್ ! !!
September 1, 2020, 11:59 AM

ಅನುಷ್ ಪಂಡಿತ್ ಮಂಗಳೂರು
Info.reporterkarnataka@gmail.com
ಕೊರೊನಾ ಆತಂಕದ ನಡುವೆಯೂ ಕರಾವಳಿಯಾದ್ಯಂತ ಓಣಂ ಹಬ್ಬವನ್ನು ಸಂಭ್ರಮ – ಸಡಗರದಿಂದ ಆಚರಿಸಲಾಯಿತು. ಮನೆ-ಮಠ, ಸಂಘ-ಸಂಸ್ಥೆಗಳಲ್ಲಿ ಸಂಭ್ರಮಿಸಲಾಯಿತು.

ಮಂಗಳೂರಿನ ಕೇರಳ ಸಮಾಜಂ, ಬಜಾಲ್ ನ ಕೆಎಚ್ಬಿ ಕಾಲೋನಿ ಹಾಗೂ ವಿವಿಧ ಸಂಸ್ಥೆಗಳಲ್ಲಿ ಕೊರೊನಾ ನಿಬಂಧನೆಗಳನ್ನು ಪಾಲಿಸಿ ಸರಳವಾಗಿ ಓಣಂ ಹಬ್ಬವನ್ನು ಆಚರಿಸಲಾಯಿತು.

ಅಕ್ಕಪಕ್ಕದ ಮನೆ ಮಹಿಳೆಯರು ಜತೆಗೂಡಿ ಹಬ್ಬವನ್ನು ಸಂಭ್ರಮದಿಂದ ತಮ್ಮ ಮನೆಗಳ ಆವರಣದಲ್ಲಿಯೇ ಆಚರಿಸಿದರು. ವಾಟ್ಸಾಪ್ ಸ್ಟೇಟಸ್ ಗಳಲ್ಲಿ ನೀರೆಯರು ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಹೆಚ್ಚಿನವರು ವಾಟ್ಸಾಪ್ ಸ್ಟೇಟಸ್ ನಲ್ಲಿ ಓಣಂ ಝಳಕ್ ಹೆಚ್ಚಾಗಿ ಕಂಡು ಬರುತ್ತಿತ್ತು.

ಜಾತಿ ಮತದ ಎಲ್ಲೆ ಮೀರಿ ಹಬ್ಬವನ್ನು ಆಚರಿಸಲಾಗುತ್ತದೆ. ಸೌಹಾರ್ದತೆ, ಭಾತೃತ್ವ ಸಾರುವುದರಿಂದ ಹಬ್ಬಕ್ಕೆ ಹೆಚ್ಚಿನ ಪ್ರಾಧಾನತ್ಯೆ ಬಂದಿದೆ. ಶಾಲಾ- ಕಾಲೇಜುಗಳಿಲ್ಲದೆ, ಆನ್ಲೈನ್ ಕ್ಲಾಸ್ ಗಳಿಂದ ಬೇಸತ್ತಿದ್ದ ಮಕ್ಕಳಿಗೆ ಹಬ್ಬವು ಕೊಂಚ ರಿಲೀಫ್ ನೀಡಿದೆ. ಪೂಕಳಂ ಮಾಡಿ ಕೇರಳ ಮಾದರಿಯ ಸಾರಿಯನ್ನುಟ್ಟು ಹೆಣ್ಮಕ್ಕಳು ಸಂಭ್ರಮಿಸಿದರು.

ಒಟ್ಟಿನಲ್ಲಿ ಹಬ್ಬಗಳು ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನೂ ಯುವ ಪೀಳಿಗೆಗೆ ಕಲಿಸಿ ಕೊಡುತ್ತದೆ. ಆಚರಣೆಗಳು ಸೌಹಾರ್ದತೆಯನ್ನೂ ವೃದ್ಧಿಗೊಳಿಸುತ್ತದೆ.