ಇತ್ತೀಚಿನ ಸುದ್ದಿ
ಅಕ್ಟೋಬರ್ 16ರಂದು ಶಬರಿಮಲೆ ದರ್ಶನ: 17ರಿಂದ ಭಕ್ತರಿಗೆ ಅವಕಾಶ
October 11, 2020, 10:23 AM

ಶಬರಿಮಲೆ(reporterkarnataka news): ಕೇರಳದ ಪ್ರಸಿದ್ದ ಶಬರಿಮಲೆ ದೇವಸ್ಥಾನ ತುಲಾ ತಿಂಗಳ ಪೂಜೆಗಾಗಿ ಅಕ್ಟೋಬರ್ 16ರಂದು ಬಾಗಿಲು ತೆರೆಯಲಿದೆ. ಭಕ್ತರ ದರ್ಶನಕ್ಕೆ ಅಕ್ಟೋಬರ್ 17ರಿಂದ ಅವಕಾಶ ದೊರೆಯಲಿದೆ. ಅಕ್ಟೋಬರ್ 21ರಂದು ಮತ್ತೆ ಶಬರಿಮಲೆ ಬಾಗಿಲು ಮುಚ್ಚಲಾಗುವುದು ತುಲಾಮಾಸದ ಪೂಜೆ ವೇಳೆ ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ದೊರೆಯಲಿದೆ. ಇದರ ಅಂಗವಾಗಿ ವರ್ಚುವಲ್ ಬುಕ್ಕಿಂಗ್ ಇಂದು ಆರಂಭವಾಗಿದೆ.
ಪ್ರತಿದಿನ 250 ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ದೊರೆಯಲಿದೆ. ವರ್ಚುವಲ್ ಕ್ಯೂ ಮೂಲಕ ಇದನ್ನು ಬುಕ್ ಮಾಡಬೇಕಾಗಿದೆ. ದರ್ಶನಕ್ಕೆ ಒಂದುವರೆ ಗಂಟೆ ಮೊದಲು ಅವರು ಪಂಪಾ ತಲುಪಿರಬೇಕು . ಪಂಪಾ ನದಿಯಲ್ಲಿ ಭಕ್ತರು ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ..