ಇತ್ತೀಚಿನ ಸುದ್ದಿ
‘ಓ ಮೈ ಲವ್’ ಬಿಡುಗಡೆ: ಹದಿಹರೆಯದ ಲವ್ ಸಾಂಗ್ ಗೆ 16ರಯುವ ಜೋಡಿಗಳ ಅಭಿನಯ!
December 13, 2020, 9:29 PM

ಬೆಂಗಳೂರು(reporterkarnataka news):
ಡ್ರಾಮಾ ಜೂನಿಯರ್ ತುಷಾರ್ ಗೌಡ ಹಾಗೂ ಮಜಾಭಾರತ ಖ್ಯಾತಿಯ ಆರಾಧನಾ ಭಟ್ ಅಭಿನಯಿಸಿರುವ ‘ಓ ಮೈ ಲವ್’ ಚಿತ್ರ ದ ಹಾಡಿನ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ರಾಜಾಜಿನಗರದ ಓರಿಯನ್ ಮಾಲ್ ನಲ್ಲಿ ಪಿ.ವಿ.ಆರ್ XL ನಲ್ಲಿ ನಡೆಯಿತು.
ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸಮಾರಂಭ ಅದ್ದೂರಿ ಆಗಿ ನಡೆಯಿತು. ರಾಜ್ಯ ಪ್ರಶಸ್ತಿ ವಿಜೇತ ಪಿ.ಶೇಷಾದ್ರಿ, ಕನ್ನಡ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಖ್ಯಾತ ಗಾಯಕಿ ಅನುರಾಧ ಭಟ್ ಬಿಡುಗಡೆ ಗೊಳಿಸಿದರು. ಪರಿಕಲ್ಪನೆ, ಸಾಹಿತ್ಯ ಹಾಗೂ ನಿರ್ದೇಶನ ಜೀವನ ಗಂಗಾಧರಯ್ಯ ಅವರದ್ದು. ಸಂಗೀತ ವನ್ನು ಜತಿನ್ ದರ್ಶನ್, ಸತ್ಯ ರಾಧಾಕೃಷ್ಣ ನೀಡಿದ್ದಾರೆ. ಪಿ.ಅಕ್ಷಯ್ ರಾವ್ ಅವರ ಸಂಕಲನ ಹಾಗೂ ರಾಜರಾವ್ ಅಂಚಲ್ಕರ್ ಅವರ ಛಾಯಾಗ್ರಹಣ ಮಾಡಿದ್ದಾರೆ ಪ್ರಭಾಕರ ಬಿ.ಪಿ ಅವರು ಚಿತ್ರದ ನಿರ್ಮಾಪಕರಾಗಿದ್ದಾರೆ. ಒಂದು ಅದ್ಬುತವಾದ ಸಂಗೀತವಿದ್ದು ಈಗಾಗಲೇ A2 ಮೂಸಿಕ್ ಯುಟೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದ್ದು ಹದಿಹರೆಯದ ಲವ್ ಸಾಂಗ್ ಗೆ ಹದಿನಾರರ ಹರೆಯದ ತುಷಾರ್ ಗೌಡ ಹಾಗೂ ಆರಾಧನ ಭಟ್ ಮನೋಜ್ಞವಾಗಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .12 ಸಾವಿರ ಕ್ಕೂ ಅಧಿಕ ವಿವ್ಸ್ ಒಂದೇ ದಿನದಲ್ಲಿ ಆಗಿದೆ.