7:10 AM Saturday28 - November 2020
ಬ್ರೇಕಿಂಗ್ ನ್ಯೂಸ್
ಉಗ್ರ ಸಂಘಟನೆ ಪರ ಗೋಡೆ ಬರಹದ ತನಿಖೆಗೆ ಪ್ರತ್ಯೇಕ ತಂಡ ರಚನೆ: ಪೊಲೀಸ್ ಯಕ್ಷಗಾನ ದೇವ ಪರಂಪರೆಯ ಮೂಲ ಕಲೆಯಾಗಿದ್ದು ಅಧ್ಯಯನ ಅಗತ್ಯ: ನಿತ್ಯಾನಂದ  ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ

ಇತ್ತೀಚಿನ ಸುದ್ದಿ

ಬಡ ವೃದ್ದ ಮಹಿಳೆಯ ಕಾಲಬುಡಕ್ಕೆ ನ್ಯಾಯ!: ವೃದ್ಯಾಪ್ಯ ವೇತನ ಪ್ರಕರಣ ಇತ್ಯರ್ಥ

September 7, 2020, 2:41 AM

ಹೈದರಾಬಾದ್(reporter Karnataka News): ಬಡ ವೃದ್ದ ಮಹಿಳೆಯೊಬ್ಬರ ಕಾಲ ಬುಡಕ್ಕೆ ಬಂದು ನ್ಯಾಯಾಧೀಶರು ಆಕೆಯ ಅಹವಾಲು ಆಲಿಸಿ ಪ್ರಕರಣವನ್ನು ಅಲ್ಲೇ ಇತ್ಯರ್ಥ ಮಾಡಿದ ಘಟನೆ ನಡೆದಿದೆ.

ಇದು ನಡೆದದ್ದು ತೆಲಂಗಾಣದ ಭೂಪಾಲಪಳ್ಳಿ ಜಿಲ್ಲಾ

ನ್ಯಾಯಾಲಯದಲ್ಲಿ. ಅಲ್ಲಿನ ನ್ಯಾಯಾಧೀಶರಾದ

ಅಬ್ದುಲ್ ಹಸೀಮ್ ಅವರು ತನ್ನ ಪೀಠದಿಂದ ಎದ್ದು ಬಂದು ನ್ಯಾಯಾಲಯದ ಪ್ರವೇಶ ದ್ವಾರದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತ್ತಿದ್ದ ಮಹಿಳೆಯನ್ನು ಭೇಟಿಯಾದರು. ನ್ಯಾಯಾಧೀಶರು ಕೂಡ ಮೆಟ್ಟಿಲು ಮೇಲೆ ಕುಳಿತು ವೃದ್ದೆಯ ಅಹವಾಲು ಆಲಿಸಿದರು.

ತನ್ನ ವೃದ್ಧಾಪ್ಯ ವೇತನ ಕುರಿತ ಪ್ರಕರಣದಲ್ಲಿ ಹಾಜರಾಗಲು ಮೆಟ್ಟಲು ಹತ್ತಿ ಮೇಲೆ ಬರಲು ಆಕೆಗೆ ಆಯಾಸವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಸಂಬಂಧಪಟ್ಟ ಕಡತಗಳೊಂದಿಗೆ ಮಹಡಿಯ ಮೆಟ್ಟಿಲು ಇಳಿದು ಬಂದಿದ್ದರು.

ನ್ಯಾಯಾಧೀಶ ಬಗ್ಗೆ  ನನಗೆ ಹೆಮ್ಮೆ ಎನಿಸಿದೆ ಎಂದು ನ್ಯಾ. ಮಾರ್ಕಾಂಡೇಯ ಖಟ್ಜು ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು