ಇತ್ತೀಚಿನ ಸುದ್ದಿ
ಎನ್ನೆಸ್ಸೆಸ್ ಯುವಜನೋತ್ಸವ: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಗೆ ಸತತ 3ನೇ ಬಾರಿ ಪ್ರಶಸ್ತಿ
January 11, 2021, 7:30 PM

ಮಂಗಳೂರು(reporterkarnataka news)
ಗುಲ್ಬರ್ಗ ವಿಶ್ವ ವಿದ್ಯಾನಿಲಯದಲ್ಲಿ ನಡೆದ ಎನ್ ಎಸ್ ಎಸ್ ಯುವ ಜನೋತ್ಸವದಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ತನ್ನ ಮುಡಿಗೇರಿಸಿಕೊಂಡಿದೆ. ಸತತ ಮೂರು ವರ್ಷಗಳಿಂದಲೂ ಪ್ರಶಸ್ತಿ ಪಡೆದು ಟ್ರೋಫಿಯನ್ನು ತಮ್ಮಲೇ ಉಳಿಸಿಕೊಂಡಿದೆ.
ಪುತ್ತೂರು ವಿವೇಕಾನಂದ ಕಾಲೇಜಿನ ಯೋಜನಾಧಿಕಾರಿ ಶ್ರೀನಾಥ್, ರಾಮಕೃಷ್ಣ ಕಾಲೇಜಿನ ಸೌರಬ್, ಕಾರ್ಕಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಜಿತ್, ಪುತ್ತೂರು ವಿವೇಕಾನಂದ ಕಾಲೇಜಿನ ಭವಿಷ್ಯತ್, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಜೋಶ್ನಾ, ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಅನನ್ಯ, ಉಡುಪಿ ಎಂಜಿಎಂ ಕಾಲೇಜಿನ ವರ್ಷಿಣಿ, ಭಾಗವಹಿಸಿದ್ದರು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ ತಿಳಿಸಿದ್ದಾರೆ.