1:32 PM Saturday5 - December 2020
ಬ್ರೇಕಿಂಗ್ ನ್ಯೂಸ್
ಬೆಳಗಾವಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ಮತ್ತೆ ನರ್ತಿಸಲಿದೆ ಕದ್ರಿ ಸಂಗೀತ ಕಾರಂಜಿ: ಶನಿವಾರ,  ಭಾನುವಾರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕದ್ರಿ –… ದಿಲ್ಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ  ಶ್ರೀನಿವಾಸಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಜಿ ಮೇಯರ್, ಕಾಂಗ್ರೆಸ್ ಹಿರಿಯ ನಾಯಕ, ಸಜ್ಜನ ರಾಜಕಾರಣಿ ಕೆ.ಕೆ. ಮೆಂಡನ್ ಇನ್ನಿಲ್ಲ ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ…

ಇತ್ತೀಚಿನ ಸುದ್ದಿ

ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್:ನಿವೃತ್ತರಾದ ಮೂವರು  ಸಿಬ್ಬಂದಿಗಳಿಗೆ ಬೀಳ್ಕೊಡುಗೆ

October 21, 2020, 8:15 AM

ಬಂಟ್ವಾಳ(reporterkarnataka news): ಬೀಡಿ ಕಂಟ್ರಾಕ್ಟ್ ದಾರರ ಸಂಘದ ನೇತೃತ್ವದಲ್ಲಿ ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್ ಬಿ.ಸಿ. ರೋಡು ಡಿಪೋ ದಲ್ಲಿ ಸೇವೆ ನಿವೃತ್ತಿ ಹೊಂದಿದ ಪಾಲುದಾರ ಸುಧಾಕರ ಶೆಣೈ ಮತ್ತು ಮೂವರು  ಸಿಬ್ಬಂದಿಗಳಾದ ಜಗದೀಶ್ ಪೈ ಬಂಟ್ವಾಳ, ಸದಾನಂದ ಪಾಣೆಮಂಗಳೂರು, ಪ್ರಕಾಶ್ ಶೆಣೈ ಬಿಸಿರೋಡು ಅವರನ್ನು ಡಿಪೋದಲ್ಲಿ ಗೌರವ ನೀಡಿ ಬೀಳ್ಕೊಡಲಾಯಿತು.

  ಕಂಪನಿಯ ಪಾಲುದಾರ ಉಮೇಶ್ ಶೆಣೈ ಅವರು ಬೀಳ್ಕೋಡುಗೆ  ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಸಂಸ್ಥೆಯ ಅಭಿವೃದ್ಧಿ ಗಾಗಿ ಸಿಬ್ಬಂದಿ ಗಳು ಶ್ರಮವಹಿದರೆ ಅದರ ಪಾಲು ಕಂಪೆನಿಯ ಸರ್ವ ವಿಭಾಗಕ್ಕೂ ಸಿಗಲಿದೆ ಎಂದರು.

 ಬೀಡಿ ಉದ್ಯಮದಲ್ಲಿಯೂ ಸ್ಪರ್ಧಾತ್ಮಕ ಮಾರುಕಟ್ಟೆ ಇರುವುದರಿಂದ ಗುಣಮಟ್ಟವನ್ನು ಕಾಯ್ದುಕೊಂಡು ವ್ಯವಹಾರವನ್ನು ಮಾಡಬೇಕಾಗಿದೆ ಎಂದರು. 

ಈ ಸಂದರ್ಭದಲ್ಲಿ ಬೀಡಿ ಕಂಟ್ರಾಕ್ಟ್ ದಾರರ ಸಂಘದ ಗೌರವಾಧ್ಯಕ್ಷ ಬಾಬು ಪೂಜಾರಿ ಮಾರ್ನಬೈಲು, ಸಂಸ್ಥೆ ಯ ಮ್ಯಾನೇಜರ್ ಕೂಸಪ್ಪ ಮೂಲ್ಯ, ಸಂಘದ ಪ್ರಮುಖರಾದ ವಿಶ್ವನಾಥ ಕೊಟ್ಟಾರಿ ಸಜೀಪ ಮುನ್ನೂರು,  ಹರೀಶ್ ತುಳಸಿವನ, ಸುಧಾಕರ ಆಚಾರ್ಯ, ಇಂದ್ರೇಶ್ ಸಂಚಯ ಗಿರಿ, ಉಂಜ್ಞಾ ನಂದಾವರ, ನಜೀರ್ ನಂದಾವರ ಹಾಗೂ ಸಂಘದ ಸದಸ್ಯರು ಉಪಸ್ಥಿತಿ ರಿದ್ದರು.

ಪ್ರಶಾಂತ್ ಕೊಟ್ಟಾರಿ ಸ್ವಾಗತಿಸಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು