ಇತ್ತೀಚಿನ ಸುದ್ದಿ
ನಿವೃತ್ತ ಐಪಿಎಸ್ ಅಧಿಕಾರಿ ಪಿ. ಜಿ. ಹರ್ಲಂಕರ್ ನಿಧನ: ವೈದ್ಯಕೀಯ ಕಾಲೇಜಿಗೆ ಪಾರ್ಥಿವ ಶರೀರ ಹಸ್ತಾಂತರ
January 3, 2021, 2:58 PM

ಬೆಂಗಳೂರು( reporterkarnataka news): ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಪಿ . ಜಿ . ಹರ್ಲಂಕರ್ ಇನ್ನಿಲ್ಲ. 1983ರಿಂದ 1986 ರ ತನಕ ಹರ್ಲಂಕರ್ ಅವರು ಬೆಂಗಳೂರು ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಹರ್ಲಂಕರ್ ಅವರ ಬಯಕೆಯಂತೆ ಮೃತದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗಾಗಿ ಹಸ್ತಾಂತರಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.