ಇತ್ತೀಚಿನ ಸುದ್ದಿ
ಬೆಂಗಳೂರಿನಲ್ಲಿ 80 ಲಕ್ಷ ರೂಪಾಯಿ ನಿಷೇಧಿತ ನೋಟು ವಶ: ಇಬ್ಬರ ಬಂಧನ
October 5, 2020, 8:09 AM

ಬೆಂಗಳೂರು(reporterkarnataka news): ಕೇಂದ್ರ ಸರ್ಕಾರ ಚಲಾವಣೆಯಿಂದ ಹಿಂತೆಗೆದುಕೊಂಡಿರುವ 80 ಲಕ್ಷ ರೂಪಾಯಿ ಮೌಲ್ಯದ ಹಳೆ ನೋಟುಗಳನ್ನು ಬೆಂಗಳೂರಿನಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಶೇಕ್ ತುಫೆಲ್ ಮತ್ತು ಮುದಾಸಿರ್ ಎಂದು ಗುರುತಿಸಲಾಗಿದೆ.
ಆರ್. ಟಿ. ನಗರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.