1:14 AM Wednesday21 - October 2020
ಬ್ರೇಕಿಂಗ್ ನ್ಯೂಸ್

ಇತ್ತೀಚಿನ ಸುದ್ದಿ

ನಿರೂಪಕ ಅಕುಲ್ ಬಾಲಾಜಿ ಬಂಧನ ಸಾಧ್ಯವೇ?: ಇಂದು ಸಿಸಿಬಿ ವಿಚಾರಣೆ ಬಿಸಿ

September 19, 2020, 8:36 AM

ಬೆಂಗಳೂರು(reporterkarnataka news): ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಮುಂದೆ ಖ್ಯಾತ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಮತ್ತು ಯುವ ರಾಜಕಾರಣಿ ಆರ್ ವಿ  ಯುವರಾಜ್ ಹಾಜರಾಗಲಿದ್ದಾರೆ. 

ಇಂದು ಬೆಳಿಗ್ಗೆ 11 ಗಂಟೆಗೆ ಮೂವರು ಆರೋಪಿಗಳು ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಈಗಾಗಲೆ ಸಿಸಿಬಿ ವಶದಲ್ಲಿರುವ ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ಈ ಮೂವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅಕುಲ್ ಬಾಲಾಜಿ, ತಮ್ಮ ಮೇಲಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಅವರು ಹೇಳಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು