ಇತ್ತೀಚಿನ ಸುದ್ದಿ
ನಿವಾರ್ ಚಂಡಮಾರುತ ಎಫೆಕ್ಟ್: ಚೆನ್ನೈನಲ್ಲಿ ಭಾರೀ ಮಳೆ, ತಗ್ಗು ಪ್ರದೇಶ ಜಲಾವೃತ
November 25, 2020, 12:40 PM

ಚೆನ್ನೈ(reporterkarnataka news): ನಿವಾರ್ ಚಂಡಮಾರುತ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ. ಚಂಡಮಾರುತದ ಪರಿಣಾಮ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಗರದ ತಗ್ಗು ಪ್ರದೇಶ ಜಲಾವೃತಗೊಂಡಿವೆ.
ಜಲಾಶಯಗಳ ನೀರಿನ ಮಟ್ಟವನ್ನು ಸತತವಾಗಿ ಗಮನಿಸಲಾಗುತ್ತಿದೆ.ಯಾವುದೇ ಪರಿಸ್ಥಿತಿ ಎದುರಿಸಲು ಎನ್ ಡಿ ಆರ್ ಎಫ್ ತಂಡ ಸಜ್ಜಾಗಿದೆ.