8:07 PM Wednesday25 - November 2020
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ಭೃಂಗೀಶ್ ನೇಮಕ ಡಿಸೆಂಬರ್ 5 ರಾಜ್ಯ ಬಂದ್:  ಕನ್ನಡ ಪರ ಸಂಘಟನೆಗಳ ಸಭೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಶ್ರೀರಾಮುಲು ಭೇಟಿ ಕಾಂಗ್ರೆಸ್ ನ ತಂತ್ರಗಾರಿಕೆ ನಾಯಕ ಅಹಮ್ಮದ್ ಪಟೇಲ್ ಮಾರಕ ಕೊರೊನಾಕ್ಕೆ ಬಲಿ ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ

ನಿಮ್ಮ ‘ಹತ್ತು’ ಪದಗಳಿಗೆ ನಮ್ಮ ‘ಹತ್ತು’ ಸಾವಿರ ರೂ ಬಹುಮಾನ !!

October 15, 2020, 1:39 PM

ಬೆಂಗಳೂರು(reporterkarnataka news):

ಕುಮಾರಪುರ ಪ್ರಕಾಶನ ಗಂಗಾ ಫಾರ್ಮ್ಸ್ ಅಂಚೆ ಕೊಂಬಾರು, ದ.ಕ 574230 ಇವರು ಆಯೋಜಿಸಿರುವ ‘ನಾನು ಮತ್ತು ನನ್ನ ಗೀಚು’

ಶೀರ್ಷಿಕೆಯಲ್ಲಿ  ಕನ್ನಡ ರಾಜ್ಯೋತ್ಸವ-2020 ಹಾಗೂ ಕವಿ, ವಾಗ್ಮಿ, ಬರಹಗಾರಾದ ನಿವೖತ್ತ ಪ್ರಾಚಾರ್ಯ ದಿ. ಕನೋಗೌರ 10ನೇ ವರ್ಷದ ಪುಣ್ಯತಿಥಿ ಸ್ಮರಣಾರ್ಥ ರಾಜ್ಯದ ಕನ್ನಡದ ಬರಹಗಾರರಿಗೆ ಹನಿಗವನ/ಚುಟುಕು ಸ್ಪರ್ಧೆ ಏರ್ಪಡಿಸಲಾಗಿದೆ. 

ಉತ್ಯುತ್ತಮವಾಗಿ ಆಯ್ಕೆಯಾದ ಮೊದಲ ಕವನಕ್ಕೆ 10,001/- ರೂ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಎರಡನೆಯ ಹಾಗೂ ಮೂರನೆಯ ಬಹುಮಾನವಾಗಿ ತಲಾ ರೂ. 5001/- ಹಾಗೂ ರೂ. 2001/- ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.  

ಉತ್ತಮವೆಂದು ಕಂಡು ಬಂದ ಮೊದಲ 40 ಬರಹಗಳಿಗೆ ಪ್ರಶಸ್ತಿ ಹಾಗೂ ಹೀಗೆ ಆಯ್ಕೆಯಾದ ಎಲ್ಲ ಹನಿಗವನ/ಚುಟುಕುಗಳನ್ನು ‘ನಾನು ನನ್ನ ಗೀಚು-2020’ ಶಿರ್ಷಿಕೆಯಲ್ಲಿ  ವರ್ಷಾಂತ್ಯ/ಮುಂದಿನ ಮಾರ್ಚ್ ತಿಂಗಳ ಒಳಗಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಉದ್ದೇಶ ಹೊಂದಲಾಗಿದೆ.

ನಿಬಂಧನೆಗಳು:

 1. ಬರಹಗಳನ್ನು ಸ್ವಚ್ಛ ಕನ್ನಡ ಭಾಷೆಯಲ್ಲಿ ಬರೆದಿರಬೇಕು(ಆಂಗ್ಲ ಅಥವಾ ಇತರ ಬೇರೆ ಭಾಷೆಯ ಪದಗಳನ್ನು ಖಡ್ಡಾಯವಾಗಿ ಬಳಸುವಂತಿಲ್ಲ. ಸಂಸ್ಕೖತ ಪದಗಳ ಬದಲಾಗಿ ಕನ್ನಡ ತದ್ಭವ ರೂಪದ ಪದ ಬಳಸಿರಬೇಕು)
 2. ಗರಿಷ್ಟ ಹತ್ತು ಪದಗಳು ಯಾ 40 ಅಕ್ಷರಗಳನ್ನು  (ಸರಳ/ಸಂಯುಕ್ತ) ಹೊಂದಿರಬೇಕು.
 3. ಬರಹ ಸ್ವಂತದ್ದಾಗಿರಬೇಕು. ಹಿಂದೆಲ್ಲೂ ಪ್ರಕಟವಾಗಿರಬಾರದು. ಕೖತಿ ಚೌರ್ಯಕ್ಕೆ ಆಸ್ಪದವಿಲ್ಲ .

ಬರಹಗಾರೇ ಇದಕ್ಕೆ ನೇರ ಹೊಣೆ. 

 1. ಒಬ್ಬರು ಒಂದು ಕವನವನ್ನು ಮಾತ್ರ ಕಳುಹಿಸಬಹುದಾಗಿದೆ.
 2. ಬರಹವನ್ನು ಅಚ್ಚುಕಟ್ಟಾಗಿ ಕನ್ನಡ ಕಂಪ್ಯೂಟರ್ ಅಕ್ಷರಗಳಲ್ಲಿ ಬಿಳಿ ಹಾಳೆಯಲ್ಲಿ ಮುದ್ರಿಸಿ ನೇರವಾಗಿ

“ನಾನು ನನ್ನ ಗೀಚು, ಕುಮಾರಪುರ ಪ್ರಕಾಶನ, ಗಂಗಾ ಫಾರ್ಮ್ಸ್, ಕೊಂಬಾರು ಅಂಚೆ ದ.ಕ.574230 ಅಥವಾ ಶ್ರೀ ಕಾರ್ತಿಕ್ ಪಿ.ಕೆ ಇವರ  ಕನ್ನಡ ಸಾಹಿತ್ಯ (kannadasahithya) ಇನ್ಸ್ಟಗ್ರಾಂ  ಪುಟವನ್ನು ಫಾಲೋ ಮಾಡಿ ಸಂದೇಶ ಬಾಕ್ಸಿಗೆ/Direct Message ಹಾಕಿ ಅಥವಾ  ಮುಖಪುಟದ (ಫೇಸ್ ಬುಕ್)ನ ನಾನು ನನ್ನ ಗೀಚು ಬ್ಲಾಗ್ ನ್ನು ಫಾಲೋಮಾಡಿ  ಕಮೆಂಟ್ಸ್ ಬಾಕ್ಸ್ ಗೆ ಹಾಕಿ ಯಾ

*ವಾಟ್ಸಪ್ ಸಂಖ್ಯೆ *9019941619* ಕ್ಕೆ,   

ನಿಮ್ಮ ಹೆಸರು ಮತ್ತು ವಾಟ್ಸಪ್ ಸಂಖ್ಯೆ ಅಥವಾ ಇ ಮೈಲ್ ನ್ನು  ಕೊನೆಯಲ್ಲಿ/ ಪ್ರತ್ಯೇಕವಾಗಿ ಬರೆದು ಕಳುಹಿಸಬೇಕು. (ಆಯ್ಕೆ ಮಂಡಳಿಗೆ ನಿಮ್ಮ ಬರಹಗಳನ್ನು ಆಯ್ಕೆಗಾಗಿ ನೀಡುವಾಗ ಹೆಸರು ರಹಿತ ವಾಗಿ ನೀಡಲು ನಮಗೆ ಸಾದ್ಯವಾಗುವಂತಿರಬೇಕು).

 1. ಯಾರೂ ಭಾಗವಹಿಸಬಹುದು. ಇಲ್ಲಿ  ಯಾವುದೇ ವಯೋಮಿತಿ ಇರುವುದಿಲ್ಲ. 
 2. ಐವರು ಸದಸ್ಯರ ಆಯ್ಕೆ ಮಂಡಳಿಯ ತೀರ್ಮಾನವೇ ಅಂತಿಮ.
 3. ಮೇಲಿನ ನಿಬಂಧನೆಗೊಳಪಟ್ಟು ನಮಗೆ ತಲುಪಿದ  ಕವನಗಳನ್ನು ಮಾತ್ರ ಆಯ್ಕೆಮಂಡಳಿಗೆ ಆಯ್ಕೆಗೆ ನೀಡಲಾಗುವುದು. 

ಹೀಗೆ ಪ್ರಥಮ ಹಂತದಲ್ಲಿ ತಿರಸ್ಕೖತವಾದ ಬರಹಗಳ ಬಗ್ಗೆ ಬರಹಗಾರರಿಗೆ ಆದಷ್ಟು ಬೇಗ  ಮಾಹಿತಿ ನೀಡಲಾಗುವುದು.

 1. ಪ್ರತಿ ಬರಹಗಳಿಗೂ,  ಪ್ರತಿ ಆಯ್ಕೆಗಾರರುಾ, ಪ್ರತ್ಯೇಕವಾಗಿ

 ಅ) ಅರ್ಥಪೂರ್ಣ, 

ಆ) ಪ್ರಾಸ ಬದ್ಧ,

 ಇ) ಸಂದೇಶಾತ್ಮಕ 

ಈ)  ಭಾವಪೂರ್ಣ 

ಉ)  ಹೊಸತನ/ಸಮಗ್ರ

ಹೀಗೆ ಐದು ವಿಭಾಗಗಳಲ್ಲಿ ತಲಾ 10 ಅಂಕಗಳನ್ನು ನೀಡಲಿದ್ದು ಐವರು ಆಯ್ಕೆಗಾರರು ಬೇರೆ ಬೇರೆ ಯಾಗಿಯೇ  ಅವೆಲ್ಲವುಗಳ ಮೇಲೆ  ನೀಡಿದ ಅಂಕಗಳ  ಒಟ್ಟಾರೆ ಸರಾಸರಿ ಅಂಕಗಳನ್ನು ಪರಿಗಣಿಸಿ ಬಹುಮಾನ ಆಯ್ಕೆ ಪ್ರಕ್ರಿಯೆ ನಡಯಲಿದೆ. 

 1.  ಬರಹಗಳು ನಮಗೆ ತುಲುಪುವ ಕೊನೆಯ ದಿನಾಂಕ 24.10.2020.
 2. ಯಾವುದೇ ಅನಗತ್ಯ ಚರ್ಚೆ, ಸಂಪರ್ಕ ಯಾ ಸಂಭಾಷಣೆಗಳಿಗೆ ಅವಕಾಶವಿಲ್ಲ.
 3. ತೀರ್ಪನ್ನು ನವಂಬರ್  19,  2020 ರಂದು  ಪ್ರಕಟಿಸಲಾಗುವುದು.

ಜಾಹೀರಾತು