ಇತ್ತೀಚಿನ ಸುದ್ದಿ
ನೈಟ್ ಕರ್ಫ್ಯೂ: ನಾಳೆಯಿಂದ ಕಟೀಲು ಮೇಳದಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ
December 23, 2020, 6:08 PM

ಕಟೀಲು(reporterkarnataka news):
ಹೊಸ ಅಲೆಯ ಕೊರೊನಾ ವೈರಸ್ ನ ಭೀತಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಮೇಳ ಡಿ.24ರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶಿಸಲಿದೆ.
ಗುರುವಾರದಿಂದ(ಡಿ.24) ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಬಳಿಕ ಪ್ರಸಂಗ ಆರಂಭಿಸಲಾಗುವುದು. ರಾತ್ರಿ 9:45 ಕ್ಕೆ
ಮಂಗಳ ಹಾಡಲಾಗುವುದು. ಕಲಾವಿದರೆಲ್ಲರು ಮಧ್ಯಾಹ್ನ 2:30ಕ್ಕೆ ಚೌಕಿಯಲ್ಲಿ ಹಾಜರಿರಲು ಸೂಚಿಸಲಾಗಿದೆ.
ಬುಧವಾರ ಯಥಾಪ್ರಕಾರ ಯಕ್ಷಗಾನ ನಡೆಯಲಿದೆ. ನಾಳೆಯಿಂದ ಕರ್ಫ್ಯೂ ಮುಗಿಯುವ ತನಕ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.