11:57 AM Thursday28 - January 2021
ಬ್ರೇಕಿಂಗ್ ನ್ಯೂಸ್
ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭ: ರಾಜ್ಯಪಾಲರ ಭಾಷಣ ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ…

ಇತ್ತೀಚಿನ ಸುದ್ದಿ

ನೇತ್ರಾವತಿ ನದಿಯ ಸೇತುವೆಗೆ ಬೇಲಿ ಹಾಕಿದರೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವೃದ್ಧೆ

December 21, 2020, 12:37 AM

ಮಂಗಳೂರು (Reporter Karnataka News)

ನೇತ್ರಾವತಿಯ ರೈಲ್ವೇ ಸೇತುವೆಯಿಂದ ನದಿಗೆ ಹಾರಿ ವೃದ್ದೆ ಆತ್ಮಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ.

ಕೋಟೆಕಾರಿನ ಮಾಡೂರು ನಿವಾಸಿ ಶಾರದಾ ಗಟ್ಟಿ (68) ಆತ್ಮಹತ್ಯೆಗೈದ ದುರ್ದೈವಿ. ಶಾರದಾ ಗಟ್ಟಿ ಅವರು ಮೂಲತಃ ಉಚ್ಚಿಲದ ಸಂಗೊಳಿಗೆ ನಿವಾಸಿಯಾಗಿದ್ದರು. ಸಂಗೊಳಿಗೆಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅವರ ಹೊಟೇಲ್ ಶಾರದಕ್ಕನ ಹೊಟೇಲ್ ಎಂದು ಪ್ರಸಿದ್ದಿ ಪಡೆದಿತ್ತು.
ಮಾಡೂರಿನಲ್ಲಿರುವ ಮಗಳ ಮನೆಯಲ್ಲಿ ನೆಲೆಸಿದ್ದರೆನ್ನಲಾಗಿದೆ. ಕಳೆದ ಡಿ.15 ರಂದು ಉಚ್ಚಿಲ ಸಂಕೋಳಿಗೆಯ ತರವಾಡಿನ ಮನೆಗೆ ಸಂಕ್ರಾತಿ ಪೂಜೆಗೆ ತೆರಳಿದ್ದ ಶಾರದ ಅವರು ನಾಪತ್ತೆಯಾಗಿದ್ದರು. ಮನೆ ಮಂದಿ ಶಾರದ ಅವರು ಬೇರೆ ಮಕ್ಕಳ ಮನೆಗೆ ತೆರಳಿದ್ದಾರೆ ಎಂದು ಸುಮ್ಮನಿದ್ದರು. ಇವತ್ತು ಕೂಡ ಶಾರದ ಅವರು ಮನೆಗೆ ಹಿಂದಿರುಗದ ಹಿನ್ನಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಇದೇ ವೇಳೆ, ಜಿಲ್ಲಾ ವೆಸ್ಲಾಕ್ ಆಸ್ಪತ್ರೆಯಲ್ಲಿ ಅನಾಥ ವೃದ್ಧೆಯ ಶವ ಇರುವುದಾಗಿ ತಿಳಿಸಿದ್ದು ವಿಚಾರಿಸಿದಾಗ ಅದು ಶಾರದಾ ಗಟ್ಟಿ ಮೃತದೇಹವೆಂದು ತಿಳಿದುಬಂದಿದೆ. ಅವರ

ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೇತ್ರಾವತಿ ನದಿ ತೀರದಲ್ಲಿ ಅಪರಿಚಿತ ವೃದ್ಧೆಯ ಶವವೊಂದು ಪತ್ತೆಯಾಗಿದ್ದು ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಅದೇ ಈಗ ಶಾರದ ಗಟ್ಟಿಯವರದ್ದು ಎಂದು ಖಾತ್ರಿಯಾಗಿದ್ದು, ಸೇತುವೆಗೆ ಬೇಲಿ ಹಾಕಿದರೂ ನೇತ್ರಾವತಿಗೆ ಹಾರಿ ಪ್ರಾಣ ಬಿಡುವವರ ಸರಣಿ ಮಾತ್ರ ಮುಂದುವರಿದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು