ಇತ್ತೀಚಿನ ಸುದ್ದಿ
ಎನ್ ಸಿಬಿ ಉಪ ನಿರ್ದೇಶಕ ಮಲ್ಹೋತ್ರಾಗೆ ಕೊರೊನಾ ಸೋಂಕು
October 4, 2020, 12:17 PM

ಮುಂಬೈ(reporterkarnataka news): ಬಾಲಿವುಡ್ ನಲ್ಲಿ ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ ಉಪ ನಿರ್ದೇಶಕ ಕೆ ಪಿ ಎಸ್ ಮಲ್ಹೋತ್ರಾ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಮಲ್ಹೋತ್ರಾ ಅವರ ನೇತೃತ್ವದಲ್ಲಿ ಎನ್ ಸಿ ಬಿ, ಬಾಲಿವುಡ್ ನಲ್ಲಿ ಮಾದಕ ದ್ರವ್ಯ ಜಾಲ ನಂಟಿನ ತನಿಖೆ ನಡೆಸುತ್ತಿದೆ.
ಕಳೆದ ವಾರ ಮಲ್ಹೋತ್ರಾ ಅವರು ಖ್ಯಾತ ಸಿನೆಮಾ ತಾರೆಯರನ್ನು ವಿಚಾರಣೆಗೆ ಗುರಿಪಡಿಸಿದ್ದರು.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವಿನ ಕುರಿತಂತೆ ಮಾದಕ ದ್ರವ್ಯ ಆಯಾಮದ ಕುರಿತಂತೆ ಎನ್ ಸಿ ಬಿ ತನಿಖೆ ನಡೆಸುತ್ತಿದೆ..