ಇತ್ತೀಚಿನ ಸುದ್ದಿ
ತೆಲಂಗಾಣದಲ್ಲಿ ಭಾರಿ ಕಾರ್ಯಾಚರಣೆ: ಇಬ್ಬರು ನಕ್ಸಲರ ಹತ್ಯೆ
October 19, 2020, 9:06 AM

ಹೈದರಾಬಾದ್(reporterkarnataka news): ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇಬ್ಬರು ನಕ್ಸಲರನ್ನು ಹತ್ಯೆ ಮಾಡಲಾಗಿದೆ. ನಕ್ಸಲ್ ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ.
ಕಳೆದ ವಾರ ನಕ್ಸಲೀಯರು ಮುಲುಗು ಜಿಲ್ಲೆಯಲ್ಲಿ ಟಿಆರ್ ಎಸ್ ನಾಯಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ರೈತರನ್ನು ಟಿಆರ್ ಎಸ್ ನಾಯಕ ಶೋಷಣೆ ಮಾಡುತ್ತಿದ್ದ ಎಂದು ನಕ್ಸಲೀಯರು ಆರೋಪಿಸಿದ್ದರು.