ಇತ್ತೀಚಿನ ಸುದ್ದಿ
#NationalUnemploymentDay ಪ್ರಧಾನಿ ಮೋದಿ ಬರ್ತ್ಡೇಯಂದು ‘ನಿರುದ್ಯೋಗ ದಿನಾಚರಣೆ’ ಟ್ರೆಂಡಿಂಗ್..!! : ಟ್ವಿಟರ್, ಮೊಂಬತಿ ಅಭಿಯಾನ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಯುವ ಜನತೆ
September 17, 2020, 7:54 PM

ಜಿ.ಎನ್.ಎ.
info.reporterkarnataka@gmail.com
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟಿದ ದಿನದಂದೇ ರಾಷ್ಟ್ರೀಯ ನಿರುದ್ಯೋಗ ದಿನಾಚರಣೆಯನ್ನು ದೇಶದ ಬಹುತೇಕ ಯುವ ಜನತೆ ಆಚರಿಸಿದ್ದು, ಉದ್ಯೋಗದ ಸಮಸ್ಯೆ ಕುರಿತು ಆಕ್ರೋಶವನ್ನು ಸೋಶಿಯಲ್ ಮೀಡಿಯಾ ಹಾಗೂ ಅಭಿಯಾನದ ಮೂಲಕ ಹೊರ ಹಾಕಿದ್ದಾರೆ.
ಬಿಜೆಪಿ ಸೇರಿದಂತೆ ಅನೇಕ ಬಲಪಂಥೀಯ ಸಂಘಟನೆಗಳು ಮೋದಿ 70 ಸಂಭ್ರಮವನ್ನು ಆಚರಿಸುತ್ತಿದ್ದರೆ ಇನ್ನೊಂದಷ್ಟು ಬಹುಸಂಖ್ಯಾತ ಜನರು ರಾಷ್ಟ್ರೀಯ ನಿರುದ್ಯೋಗ ದಿನವನ್ನೂ ಆಚರಿಸಿದ್ದಾರೆ.

ಸೋಶಿಯಲ್ ಮೀಡಿಯಾವನ್ನು ಬಹಳ ಚೆನ್ನಾಗಿ ಉಪಯೋಗಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಈಗೀಗ ಇದೇ ಸೋಶಿಯಲ್ ಮೀಡಿಯಾ ಋಣಾತ್ಮಕ ಪರಿಣಾಮವನ್ನು, ಫಲಿತಾಂಶವನ್ನು ನೀಡಲು ಆರಂಭಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಇವತ್ತು ಪ್ರಧಾನಿ ಮೋದಿ ಬರ್ತ್ ಡೇ ಹ್ಯಾಶ್ ಟ್ಯಾಗ್ಗಿಂತಲೂ ನ್ಯಾಷನಲ್ಅನ್ಎಂಪ್ಲಾಯ್ಮೆಂಟ್ ಡೇ ಹ್ಯಾಶ್ ಟ್ಯಾಗ್ ಟ್ವಿಟರ್ನಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ.

#NationalUnemploymentDay ಎನ್ನುವ ಹ್ಯಾಶ್ ಟ್ಯಾಗ್ ಟ್ವಿಟರ್ನಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದ್ದು ಸುಮಾರು 3.1ಮಿಲಿಯನ್ಗೂ ಹೆಚ್ಚು ಟ್ವಿಟ್ಗಳು ಟ್ವಿಟರ್ನಲ್ಲಿ ದಾಖಲಾಗಿದ್ದು, #happybirthdaypm ಟ್ಯಾಗ್ಗಿಂತಲೂ ಸುಮಾರು ಹತ್ತುಪಟ್ಟು ಹೆಚ್ಚು ಟ್ವೀಟ್ ಆಗಿದೆ.
ಆ ಬಳಿಕ ಸಂಜೆಯ ವೇಳೆಗೆ #17baje17minute ಕೂಡ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದು ಕ್ಯಾಂಡಲ್ ಹಿಡಿದು ನ್ಯಾಷನಲ್ ಅನ್ ಎಂಪ್ಲಾಯ್ಮಂಟ್ ಡೇಯನ್ನು ಯುವ ಜನತೆ ದೇಶದಾದ್ಯಂತ ಆಚರಿಸಿದ್ದಾರೆ.
ಜತೆಗೆ #RespectYourPM ಎನ್ನುವ ಟ್ಯಾಗ್ ಕೂಡ ಸಂಜೆ ವೇಳೆ ಟ್ರೆಂಡ್ ಆಗಲು ಆರಂಭಿಸಿತ್ತು .
ಇತ್ತೀಚೆಗೆ ಬಿಜೆಪಿಯ ಯೂಟ್ಯೂಬ್ ಪೇಜ್ ವಿಡಿಯೋಗಳಿಗೂ ಡಿಸ್ಲೈಕ್ ಸಂಖ್ಯೆ ಹೆಚ್ಚಾಗುತ್ತಾ ಇರುವುದು ಬಿಜೆಪಿ ಐಟಿ ಸೆಲ್ ಕಳವಳಕ್ಕೆ ಕಾರಣವಾಗುತ್ತಿದೆ.