ಇತ್ತೀಚಿನ ಸುದ್ದಿ
ನಟಿ ಸಂಜನಾಗೆ ಸಿಗುತ್ತಾ ಬೇಲ್ ?: ಎಫ್ ಐಆರ್ ನಲ್ಲಿ ಇಲ್ಲಂತೆ ಹೆಸರು !
September 18, 2020, 8:06 AM

ಬೆಂಗಳೂರು(reporterkarnataka news): ಮಾದಕ ದ್ರವ್ಯ ಜಾಲದ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ನಟಿ ಸಂಜನಾ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಇದೀಗ ಸಂಜನಾ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ.
ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ಸಂಜನಾ ಅವರ ಹೆಸರಿಲ್ಲ ಎಂದು ಸಂಜನಾ ಪರ ವಕೀಲರು ಹೇಳಿದ್ದಾರೆ. ಜಾಮೀನು ಸಿಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ನಾಳೆ ನಡೆಯಲಿದೆ.