9:35 AM Sunday17 - January 2021
ಬ್ರೇಕಿಂಗ್ ನ್ಯೂಸ್
ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ… ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿವೇಕಾ ಸಂದೇಶ 2021’ ಕಾರ್ಯಕ್ರಮ ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಭದ್ರಾವತಿ: ಕ್ಷಿಪ್ರ ಕಾರ್ಯಪಡೆ ಕಚೇರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ… ಕೊರೊನಾ ತಡೆಗೆ ಸ್ವದೇಶಿ ವ್ಯಾಕ್ಸಿನ್ ಭಾರತದ ಸಾಧನೆಯ ಪ್ರತೀಕ: ಪ್ರಧಾನಿ ನರೇಂದ್ರ ಮೋದಿ ಲಿಂಗಸುಗೂರು: ಕೋವಿಡ್ 19 ಲಸಿಕೆ ಬಾಕ್ಸ್ ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡ ತಾಲೂಕು… ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿ ಸ್ಥಾನ: ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಎಸ್.… ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಿಂದ ಬಿದ್ದು ಮೀನುಗಾರ ಸಾವು ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಮಹಿಳಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋಲಾರ ಜಿಲ್ಲಾಧಿಕಾರಿ… ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ  ದೇರಳಕಟ್ಟೆ ರೆಂಜಡಿಯ ಡಾ. ಅಬ್ದುಲ್ ಶಕೀಲ್ ನೇಮಕ

ಇತ್ತೀಚಿನ ಸುದ್ದಿ

ನಾಡಾಜೆ ದತ್ತಿನಿಧಿ ಪ್ರಶಸ್ತಿಗೆ ವಾದಿರಾಜ ಕಲ್ಲೂರಾಯ ಆಯ್ಕೆ: 17ರಂದು ಸಿರಿಮನೆಯಲ್ಲಿ ಪ್ರದಾನ

January 11, 2021, 11:14 AM

ಮಂಗಳೂರು(reporterkarnatakanews: ವಿದ್ವಾಂಸರಾದ ನಾಡಾಜೆ ನರಸಿಂಹ ಶಾಸ್ತ್ರಿ ಅವರ ಹೆಸರಲ್ಲಿ ಸಾಹಿತ್ಯ ವಿಮರ್ಶೆಗಾಗಿ ಕೊಡಮಾಡುವ ‘ನಾಡಾಜೆ ದತ್ತಿನಿಧಿ ಪ್ರಶಸ್ತಿ’ಗೆ ವಾಮಂಜೂರು ಸಂತ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಆಯ್ಕೆಯಾಗಿದ್ದಾರೆ.

ವಾದಿರಾಜ ಕಲ್ಲೂರಾಯ ಅವರ ಯಕ್ಷಗಾನ ಪ್ರಸಂಗದಲ್ಲಿ ಕನ್ನಡ ಸಾಹಿತ್ಯ ಸೌಂದರ್ಯ ವಿಮರ್ಶಾ ಪ್ರಬಂಧ ಸಾಹಿತ್ಯಕ್ಕೆ ಈ ಪ್ರಶಸ್ತಿ ದೊರೆತಿದೆ. ಅಗರಿ ಶ್ರೀನಿವಾಸ ಭಾಗವತರು ಬರೆದ ದೇವೀ ಮಹಾತ್ಮೆ, ಧನಗುಪ್ತ ಮಹಾಬಲಿ, ಶಿಮಂತೂರು ನಾರಾಯಣ ಶೆಟ್ಟಿ ಅವರ ಕಟೀಲು ಕ್ಷೇತ್ರ ಮಹಾತ್ಮೆ, ಮಧೂರು ವೆಂಕಟಕೃಷ್ಣ ಅವರ ವೈಶಾಲಿನಿ ಪರಿಣಯ, ಗಣೇಶ ಕೊಲೆಕಾಡಿ ಅವರ ಶಬರಕುಮಾರ ಪ್ರಸಂಗದ ಸಾಹಿತ್ಯ ಸೌಂದರ್ಯದ ಬಗ್ಗೆ ವಾದಿರಾಜ ಅವರು ವಿಮರ್ಶಾ ಪ್ರಬಂಧ ಬರೆದಿದ್ದರು.

ಜ. ೧೭ ರಂದು ನಾಡಾಜೆ ಸಿರಿಮನೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಕಾರ್ಯಕ್ರಮ ನೇರಪ್ರಸಾರಗೊಳ್ಳಲಿದೆ. ಪ್ರಶಸ್ತಿ ೧೦೦೦೦ ರೂ. ನಗದು ಬಹುಮಾನವನ್ನೊಳಗೊಂಡಿದೆ.  ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಭಾಗವಹಿಸುವರು ಎಂದು ನಾಡಾಜೆ ಪ್ರತಿಷ್ಠಾನದ ಸಂಚಾಲಕ ವಿ. ಲಕ್ಷ್ಮೀನಾರಾಯಣ ಭಟ್ಟ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು