ಇತ್ತೀಚಿನ ಸುದ್ದಿ
ನಾಳೆ ಭಾರತ್ ಬಂದ್ ಗೆ ಕರೆ: ಕಾಂಗ್ರೆಸ್ ಸಹಿತ 17 ರಾಜಕೀಯ ಪಕ್ಷಗಳ ಬೆಂಬಲ ಘೋಷಣೆ
December 7, 2020, 1:39 PM

ನವದೆಹಲಿ(reporterkarnataka news): ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಕರೆಗೆ ಕಾಂಗ್ರೆಸ್ ಸೇರಿದಂತೆ 17 ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ರಾಜ್ಯದಲ್ಲಿ ಕೂಡ ರೈತ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ.
ಹೋಟೇಲ್ ಮಾಲಿಕರ ಸಂಘ ಬಂದ್ ಗೆ ನೈತಿಕ ಬೆಂಬಲ ಮಾತ್ರ ಘೋಷಿಸಿದೆ. ಹೋಟೇಲ್ ಬಂದ್ ಮಾಡದಿರಲು ನಿರ್ಧರಿಸಿದೆ.
ಪ್ರತಿಪಕ್ಷ ಆಡಳಿತ ಇರುವ ರಾಜ್ಯಗಳಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗುವ ಸಾಧ್ಯತೆಯಿದೆ.