ಇತ್ತೀಚಿನ ಸುದ್ದಿ
ಮುರುಡೇಶ್ವರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಆರ್. ಎನ್. ಶೆಟ್ಟಿ ಅವರಿಗೆ ಅಂತಿಮ ನಮನ
December 17, 2020, 8:01 PM

ಭಟ್ಕಳ(reporterkarnataka news):
ಮುರುಡೇಶ್ವರ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಛಾಪು ತಂದು ಕೊಡುವ ಮೂಲಕ ಉತ್ತರ ಕನ್ನಡದ ಹೆಸರನ್ನು ಎತ್ತರೆತ್ತರಕ್ಕೇರಿಸಿದ ಆರ್.ಎನ್.ಶೆಟ್ಟಿ ನಿಧನರಾಗಿದ್ದಾರೆ
ಉದ್ಯಮದಲ್ಲಿ ಉನ್ನತಕ್ಕೇರಿದ ಅವರು ಗಳಿಸಿದ್ದರಲ್ಲಿ ದೊಡ್ಡ ಪಾಲನ್ನು ಸಮಾಜಕ್ಕೆ ಮತ್ತೆ ಸಮರ್ಪಿಸುವಲ್ಲಿ ಮುಂಚೋಣಿಯಲ್ಲಿದ್ದರು.
ಕನಿಷ್ಠ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಗರಿಷ್ಠ ಮನ್ನಣೆ ಪಡೆದ ಹೆಗ್ಗಳಿಕೆ ಅವರದ್ದಾಗಿದೆ.