ಇತ್ತೀಚಿನ ಸುದ್ದಿ
ಮುನ್ನಾರ್ ಭೂ ಕುಸಿತ ಪ್ರಕರಣ: ಬಲಿಯಾದವರ ಸಂಖ್ಯೆ 43ಕ್ಕೆ ಏರಿಕೆ
August 9, 2020, 4:36 PM

ಇಡುಕ್ಕಿ(reporterkarnataka news): ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಸಮೀಪದ ರಾಜಮಲೆ ಎಂಬಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿದೆ. ಇಂದು ಮಣ್ಣಿನಡಿಯಿಂದ 17 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಆಗಸ್ಟ್ 7ರಂದು ಈ ದುರಂತ ಸಂಭವಿಸಿತ್ತು. ಮೃತಪಟ್ಟವರಲ್ಲಿ ಹೆಚ್ಚಿನವರು ಕಾರ್ಮಿಕರಾಗಿದ್ದಾರೆ. ತಮಿಳುನಾಡು ಮೂಲದ ಕಾರ್ಮಿಕರು ಇಲ್ಲಿನ ತೋಟಗಳಲ್ಲಿ ಕೆಲಸ ಮಾಡುತ್ತಿದ್ದರು. ಮೃತಪಟ್ಟ ಕಾರ್ಮಿಕರ ಕುಟಂಬ ಸದಸ್ಯರಿಗೆ ರಾಜ್ಯ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಇಂದು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು